ಬಸ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು


ಶಿರಸಿ : ಸಾರಿಗೆ ಸಂಸ್ಥೆಯ ಬಸ್ಸೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡ ಘಟನೆ ತಾಲ್ಲೂಕಿನ ಬನವಾಸಿ ಠಾಣೆ ವ್ಯಾಪ್ತಿಯ ದಾಸನಕೊಪ್ಪ ಬುಗಡಿ ಕೊಪ್ಪದಲ್ಲಿ ರವಿವಾರ ಸಂಭವಿಸಿದೆ.

ನಾರಾಯಣ ಕಾನಪ್ಪ ನಾಯ್ಕ್ 38 ವರ್ಷ ಬುಗುಡಿ ಕೊಪ್ಪ ಎಂಬಾತನೇ ಸಾವು ಕಂಡ ಬೈಕ್ ಸವಾರ ನಾಗಿದ್ದಾನೆ . ಈತ ರವಿವಾರ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಣಜಿ ಹಾನಗಲ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಸೀತಾರಾಮ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.