ಸಿಂಹಾಸನದ ಪ್ರಯೋಜನಗಳು ಇಲ್ಲಿದೆ ತಿಳಿದುಕೊಳ್ಳಿ..

ಸಿಂಹಾಸನ ಮಾಡುವ ವಿಧಾನ: ಮೊದಲು ಪದ್ಮಾಸನದ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ನಂತರ ಎರಡು ಕೈಗಳನ್ನು ಮುಂದೆ ತೆಗೆದುಕೊಂಡು ಹಸ್ತಗಳನ್ನು ನೆಲಕ್ಕೆ ಊರುತ್ತ ನಿಧಾನವಾಗಿ ಪೃಷ್ಠಗಳನ್ನು ಮೇಲಕ್ಕೆತ್ತಿ. ಎರಡು ಹಸ್ತ ಮತ್ತು ಮಂಡಿಯ ಮೇಲೆ ನಿಂತುಕೊಳ್ಳಿ. ನಂತರ ನಿಧಾನವಾಗಿ ಕೆಳಮುಖವಾಗಿ ಹೊಟ್ಟೆಯನ್ನು ನೆಲಕ್ಕೆ ತಾಗಿಸುತ್ತ ಕೆಳಗೆ ಮಲಗಿ. ಈ ಸಂದರ್ಭದಲ್ಲಿ ಹೊಟ್ಟೆಯ ಭಾಗ ಸಂಪೂರ್ಣವಾಗಿ ನೆಲಕ್ಕೆ ತಾಗಿರಬೇಕು. ಕೈಗಳನ್ನು ಭುಜದ ನೇರದಲ್ಲಿ ಮುಂದೆ ಚಾಚಿ. ಹಾಗೆ ಎರಡು ಹಸ್ತುಗಳನ್ನು ನೆಲಕ್ಕೆ ಒತ್ತುತ್ತ ಪುನಃ ಮೇಲಕ್ಕೆ ಬರುವುದು. ನೇರ ಕುಳಿತುಕೊಳ್ಳಿ. ಈಗ ಕಾಲುಗಳನ್ನು ಮುಂದೆ ಚಾಚಿ.

ಉಪಯೋಗ: 1. ಪದ್ಮಾಸನದ ಎಲ್ಲಾ ಲಾಭಗಳ ಜೊತೆಗೆ ನಾಭಿಯ ಭಾಗದ ಎಲ್ಲಾ ಅವಯವಗಳು ಹುರುಪುಗೊಳ್ಳುವವು.

2. ಬೆನ್ನಿನ ಭಾಗ ಹಿಗ್ಗಲ್ಪಡುತ್ತದೆ. ಬೆನ್ನು ನೇರವಾಗುತ್ತದೆ.

3. ಸೊಂಟದ ನೋವು ನಿವಾರಣೆಯಾಗುತ್ತದೆ ಹಾಗೂ ಪಕ್ಕೆಲುಬಿನ ಭಾಗ ಹಿಗ್ಗಲ್ಪಡುತ್ತದೆ.

Categories: ನಾಟಿ ನಂಟು

Leave A Reply

Your email address will not be published.