ಓಟ್ಸ್ ಮಿಕ್ಸ್ ಕೇಸರಿ ಬಾತ್ ಸವಿದು ನೋಡಿ

ಅಡುಗೆ ಮನೆ: ಕೇಸರಿ ಬಾತ್ ಎಂದರೆ ಅಕ್ಕಿಯಿಂದ ಮಾಡುವುದು ಮಾತ್ರ ಸಾಧಾರಣವಾಗಿ ಎಲ್ಲರಿಗೂ ತಿಳಿದಿರುತ್ತದೆ. ಅದೇ ರೀತಿ ಓಟ್ಸ್ ನಿಂದಲೂ ಕೇಸರಿಯನ್ನು ಮಾಡಿ ಸವಿದು ನೊಡಿ.

ಬೇಕಾಗುವ ಸಾಮಗ್ರಿಗಳು: ಅಕ್ಕಿ- ಅರ್ಧ ಬಟ್ಟಲು, ಓಟ್ಸ್- 1 ಬಟ್ಟಲು, ಸಕ್ಕರೆ- 1 1/2 ಬಟ್ಟಲು, ತುಪ್ಪ- 1/2 ಬಟ್ಟಲು, ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ, ಕೇಸರಿ ಬಣ್ಣ ಸ್ವಲ್ಪ, ಏಲಕ್ಕಿ ಪುಡಿ ಸ್ವಲ್ಪ, ಒಣ ಕೊಬ್ಬರಿ ಚೂರು ಸ್ವಲ್ಪ, ಲವಂಗ- 4-5

ಮಾಡುವ ವಿಧಾನ: ಮೊದಲು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಅಕ್ಕಿಯನ್ನು ಹುರಿದುಕೊಳ್ಳಬೇಕು. ಅದಕ್ಕೆ 2 ಬಟ್ಟಲು ನೀರು ಸೇರಿಸಿ ಜೊತೆಗೆ ಓಟ್ಸ್ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಸಕ್ಕರೆ, ಕೇಸರಿ ಬಣ್ಣ, ಏಲಕ್ಕಿ ಪುಡಿ, ಗೋಡಂಬಿ ದ್ರಾಕ್ಷಿ, ಕೊಬ್ಬರಿ ಚೂರು ಸೇರಿಸಿ ಹದವಾಗಿ ಬೇಯಿಸಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಲವಂಗ ಹಾಕಿ ಬಿಸಿ ಬಿಸಿ ಓಟ್ಸ್ ಮಿಕ್ಸ್ ಕೇಸರಿ ಬಾತ್ ಸವಿಯಲು ನೀಡಿ

Categories: ಅಡುಗೆ ಮನೆ

Leave A Reply

Your email address will not be published.