ಸುವಿಚಾರ

ಅಧ್ರುವೇಣ ಶರೀರೇಣ ಪ್ರತಿಕ್ಷಣವಿನಾಶಿನಾ
ಧ್ರುವಂ ಯೋ ನಾರ್ಜಯೇದ್ಧರ್ಮಂ ಸ ಶೋಚ್ಯೋ ಮೂಢಚೇತನಃ ||

ಶೀರ್ಯಂತ ಇತಿ ಶರೀರಾಣಿ – ನಾಶಶೀಲವಾದ್ದು ಶರೀರ. ಈ ವಿನಾಶಿಯಾದ ಶರೀರವನ್ನಿಟ್ಟುಕೊಂಡು ಶಾಶ್ವತವಾಗಿ ಉಳಿಯುವಂಥದನ್ನು ಸಾಧಿಸಬೇಕು. ಶಾಶ್ವತವಾದ ಆ ಒಂದಂಶ ಧರ್ಮವಲ್ಲದೇ ಬೇರೆಯಲ್ಲ. ಹಾಗಾಗಿ ಮಾನವ ಶರೀರದಲ್ಲಿ ಇದ್ದುಕೊಂಡು ಧರ್ಮಾರ್ಜನೆಗೆ ಎಳಸದೆ ಇರುವವನು ಮೂಢನು.
ಸಕಲ ಜೀವರಾಶಿಗಳಲ್ಲಿ ’ಇರವಿನ ಅರಿವು’ ಹೊಂದಿರುವ ಒಂದೇ ಚೇತನ ಮಾನವನು. ಪ್ರಕೃತಿಯು ಕೊಡಮಾಡಿದ ಈ ಉನ್ನತ ಕೊಡುಗೆಯನ್ನು ಅಂತಿಮ ಸತ್ಯದ ಹೊಳವಿಗಾಗಿ ಬಳಸಿಕೊಳ್ಳದೇ ಇರುವವನು ಮೂರ್ಖನೇ ಸರಿ. ’ನಾನು ಇದ್ದೇನೆ’ ಎಂಬರಿವು ಮಾನವನಷ್ಟು ಪ್ರಬುದ್ಧವಾಗಿ ಯಾವ ಜಂತುವಿನಲ್ಲಿಯೂ ಇಲ್ಲ.

–  ಶ್ರೀ  ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.