ಅಸ್ತಮಾ ಖಾಯಿಲೆ ನಿವಾರಣೆಗೆ ಉತ್ತಮ ಸೇತು ಬಂಧಾಸನ

ಸೇತು ಬಂಧಾಸನ: ಸೇತು ಎಂದರೆ ಸೇತುವೆ ಎಂದರ್ಥ. ಶರೀರವನ್ನು ಸೇತುವೆ ಅಥವಾ ಕಮಾನಿನಂತೆ ಬಾಗಿಸುವುದಕ್ಕೆ ಸೇತು ಬಂಧಾಸನ ಎಂದು ಹೆಸರು ಬಂದಿದೆ.

ಮಾಡುವ ವಿಧಾನ: ಮೊದಲಿಗೆ ಎರಡು ಕಾಲುಗಳನ್ನು ಮಡಚಿ, ಎರಡು ಪೃಷ್ಠಗಳ ಹತ್ತಿರ ಎರಡು ಪಾದಗಳು ಬರಬೇಕು. ಈಗ ಬಲ ಹಸ್ತದಿಂದ ಬಲಗಾಲಿನ ಮಣಿಗಂಟನ್ನು ಎಡ ಹಸ್ತದಿಂದ ಎಡಗಾಲಿನ ಮಣಿಗಂಟನ್ನು ಹಿಡಿಯಬೇಕು. ನಿಧಾನವಾಗಿ ಸೊಂಟವನ್ನು ಮೇಲಕ್ಕೆ ಎತ್ತಬೇಕು. ಮಂಡಿಯ ಮೇರದಲ್ಲಿ ತೊಡೆಗಳು ಮತ್ತು ಸೊಂಟದ ಭಾಗ ಬರಬೇಕು. ಹೊಟ್ಟೆಯನ್ನು ಒಳಗಡೆ ಎಳೆದು ಎದೆಯನ್ನು ಮೇಲಕ್ಕೆ ಎತ್ತಿ ಹಿಂದಕ್ಕೆ ತಳ್ಳುತ್ತ ನೆತ್ತಿಯ ಭಾಗಕ್ಕೆ ನೆಲಕ್ಕೆ ತಾಗಿರಬೇಕು. ನಂತರ ಸೊಂಟವನ್ನು ಕೆಳಗಿಳಿಸಿ ನೆಲಕ್ಕೆ ತಾಗಿಸಬೇಕು. ಕೈಗಳನ್ನು ಬಿಟ್ಟು ಕಾಲುಗಳನ್ನು ಮುಂದೆ ಚಾಚಿ ವಿಶ್ರಾಂತಿ ಪಡೆಯಬೇಕು.

ಉಪಯೋಗ: – ಈ ಆಸನ ಮಾಡುವುದರಿಂದ ಬೆನ್ನಿನ ಭಾಗ ಹಿಗ್ಗಲ್ಪಡುವುದು.
-ಬೆನ್ನಿನ ಭಾಗದ ನರಗಳು ಚೈತನ್ಯಗೊಳ್ಳುವವು.
-ನಾಭಿಯ ಭಾಗದ ಕೊಬ್ಬಿನಂಶ ಕರಗುವುದು.
-ಅಸ್ತಮಾ, ಸಕ್ಕರೆ ಕಾಯಿಲೆ, ಗೂನು ಬೆನ್ನು, ಉಸಿರಾಟದ ತೊಂದರೆ, ಥೈರಾಯ್ಡ್‌ ಮತ್ತು ಗೊರಕೆ ಸಮಸ್ಯೆ ಇರುವವರಿಗೆ ಉತ್ತಮ ಆಸನವಿದು.

Categories: ನಾಟಿ ನಂಟು

Leave A Reply

Your email address will not be published.