ಸುವಿಚಾರ

ಸಪಕ್ಷೋ ಲಭತೇ ಕಾಕೋ ವೃಕ್ಷಸ್ಯ ವಿವಿಧಂ ಫಲಂ
ಪಕ್ಷಹೀನೋ ಮೃಗೇಂದ್ರೋಪಿ ಭೂಮಿಸಂಸ್ಥೋ ನಿರೀಕ್ಷತೇ ||

ರೆಕ್ಕೆಗಳಿದೆಯೆಂಬ ಕಾರಣಕ್ಕೆ ಕಾಗೆಯು ಮರದ ಎತ್ತರಕ್ಕಿರುವ ವಿವಿಧ ಹಣ್ಣು ಹಂಪಲುಗಳನ್ನು ತಿನ್ನುವ ಅವಕಾಶವನ್ನು ಪಡೆಯುತ್ತದೆ. ರೆಕ್ಕೆಗಳಿಲ್ಲವೆಂಬ ಕಾರಣಕ್ಕೆ ಕಾಡಿನ ರಾಜನೇ ಆಗಿದ್ದರೂ ಸಿಂಹವು ಸುಮ್ಮನೇ ಭೂಮಿಯ ಮೇಲೆ ನಿಂತು ಮರದ ಮೇಲಿರುವ ಕಾಗೆಯನ್ನು ನೋಡಬೇಕಾಗುತ್ತದೆ. ಕಾಡಿನ ರಾಜ ಸಿಂಹವೆಲ್ಲಿ, ಆಯ್ದು ತಿನ್ನುವ ಕಾಗೆಯೆಲ್ಲಿ? ಹಾಗಿದ್ದೂ ವಿಷಯಾಧಾರಿತ ಸೌಲಭ್ಯದ ಕಾರಣಕ್ಕೆ ಎತ್ತರದ ಮರದ ಹಣ್ಣಾದರೂ ಕಾಗೆಗೆ ಲಭ್ಯ, ಸಿಂಹಕ್ಕೆ ಅಲಭ್ಯ. ಈ ವಿವರಣೆಯನ್ನೋದುತ್ತ ನಿಮಗೆ ಭಾರತದಲ್ಲಿ ಅವೈಜ್ಞಾನಿಕವಾಗಿ ಅನುಸರಿಸಲಾಗುವ ಮೀಸಲಾತಿ ಪದ್ಧತಿಯು ನೆನಪಾಗಬಹುದು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.