ಸಖತ್ ಟೇಸ್ಟಿಯಾಗಿರುತ್ತೆ ಸ್ಪೆಷಲ್ ಆಲೂ ಪಲಾವ್


ಅಡುಗೆ ಮನೆ: ಬೆಳಗ್ಗಿನ ತಿಂಡಿಗೆ ಒಂದೇ ರೀತಿಯ ರೈಸ್ ಬಾತ್, ದೋಸೆ ತಿಂದು ಬೇಜಾರು ಬಂದಿರತ್ತೆ. ಹೊಸ ರೀತಿಯ ತಿಂಡಿಯನ್ನು ಮಾಡಿ ಸವಿದರೆ ಎಂಬ ಯೋಚಿಸಿರುತ್ತೀರಿ. ಅದೇ ಸಮಯಕ್ಕೆ ಸುಲಭವಾಗಿ ಮಾಡಬಹುದಾದ ಸ್ಪೇಷಲ್ ಆಲೂ ಪಲಾವ್ ಮಾಡಿ ಸವಿದು ನೋಡಿ.

ಬೇಕಾಗುವ ಸಾಮಾಗ್ರಿಗಳು: ಚಿಕ್ಕದಾಗಿ ಕತ್ತರಿಸಿದ ಆಲೂ 2, ಜೀರಿಗೆ 1 ಚಮಚ, ಬಾಸುಮತಿ ಅಕ್ಕಿ 1/2 ಕಪ್, ತುಪ್ಪ 2 ಚಮಚ, ಬೆಳ್ಳುಳ್ಳಿ 1, ಪಲಾವ್ ಎಲೆ 1, ಉಪ್ಪು ರುಚಿಗೆ ತಕ್ಕಷ್ಟು, ಏಲಕ್ಕಿ 1, ದಾಲ್ಚಿನ್ನಿ ಸ್ವಲ್ಪ, ಶುಂಠಿಪೇಸ್ಟ್ 1 ಚಮಚ, ಪುದೀನ ಎಲೆ 4-5, ಹಸಿಮೆಣಸು 2, ಕೊತ್ತಂಬರಿ ಸ್ವಲ್ಪ, ಕೆಂಪು ಮೆಣಸಿನ ಪುಡಿ 1/2 ಚಮಚ, ತೆಂಗಿನ ತುರಿ ಸ್ವಲ್ಪ, ಹುಣಸೆ ಹಣ್ಣಿನ ರಸ 1 ಚಮಚ, ನೀರು 3 ಕಪ್.

ಮಾಡುವ ವಿಧಾನ: ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಅಕ್ಕಿಯನ್ನು ತೊಳೆದು ಪಕ್ಕಕ್ಕಿಡಿ. ನಂತರ ತೆಂಗಿನ ತುರಿ, ಕೊತ್ತಂಬರಿ, ಹುಣಸೆ ರಸ , ಬೆಳ್ಳುಳ್ಳಿ, ಏಲಕ್ಕಿ, ಡಾಲ್ಚಿನ್ನಿ, ಪುದೀನ ಎಲೆಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತದನಂತರ ಕುಕ್ಕರ್ ಅನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಸಿದ್ಧಪಡಿಸಿದ ಪೇಸ್ಟ್, ಜೀರಿಗೆ, ಶುಂಠಿ ಪೇಸ್ಟ್, ಪಲಾವ್ ಎಲೆ ಹಾಕಿ ಹುರಿಯಿರಿ. ನಂತರ ಅದರಲ್ಲಿ ಅಕ್ಕಿ ಹಾಕಿ ಸ್ವಲ್ಪ ಹೊತ್ತು ಹುರಿದು ಬೇಕಾದಷ್ಟು ನೀರು ಹಾಕಿ. ಕತ್ತರಿಸಿದ ಆಲೂಗಡ್ಡೆ, ಮೆಣಸಿನ ಪುಡಿ, ಉಪ್ಪು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ 3 ವಿಶಲ್ ಬರುವರೆಗೂ ಬೇಯಿಸಿ. ಈಗ ರುಚಿಕರವಾದ ಆಲೂ ಪಲಾವ್ ರೆಡಿ

Categories: ಅಡುಗೆ ಮನೆ

Leave A Reply

Your email address will not be published.