ಸೊಂಟ ನೋವು ನಿವಾರಣೆಗೆ ಅರ್ಧ ಚಂದ್ರಾಸನ ಸಹಕಾರಿ


ಅರ್ಧ ಚಂದ್ರಾಸನವೆಂದರೆ ಶರೀರವನ್ನು ತಿರುಗಿಸಿ ಮಾಡುವ ಆಸನವಾಗಿದೆ. ಪರಿವೃತವೆಂದರೆ ತಿರುಗಿಸುವುದು ಎಂದರ್ಥ. ಶರೀರವನ್ನು ತಿರುಗಿಸಿ ಅರ್ಧ ಚಂದ್ರಾಸನ ಮಾಡುವ ಈ ಭಂಗಿಗೆ ಈ ಹೆಸರು ಬಂದಿದೆ.

ಮಾಡುವ ವಿಧಾನ: ಮೊದಲಿಗೆ ಉತ್ತಾನಾಸನದ ರೀತಿಯಲ್ಲಿ ಮುಂದೆ ಬಾಗಿ ನಿಂತು, ನಂತರ ಬಲಗೈಯನ್ನು ಎಡ ಪಾದದ ನೇರಕ್ಕೆ ನೆಲಕ್ಕೆ ಒತ್ತಿ ಬಲಗಾಲನ್ನು ಸೊಂಟದ ನೇರಕ್ಕೆ ಮೇಲೆ ತೆಗೆದುಕೊಳ್ಳಬೇಕು. ಎಡಗೈಯನ್ನು ಭುಜದ ನೇರಕ್ಕೆ ಮೇಲೆ ತಂದು, ಈ ಸ್ಥಿತಿಯಲ್ಲಿ ದೃಷ್ಟಿ ಮೇಲೆ ಇರಲಿ ಹಾಗೂ ಉಸಿರಾಟ ಸಹಜವಾಗಿರಲಿ. ಇದೇ ರೀತಿ ಮತ್ತೊಂದು ಕಡೆ ಆಸನ ಮುಂದುವರಿಸಿ.

ಉಪಯೋಗ: -ಈ ಆಸನ ಮಾಡುವುದರಿಂದ ಸೊಂಟ ನೋವು ನಿವಾರಣೆಯಾಗುವುದು.

-ಹೊಟ್ಟೆಯ ಅವಯವಗಳು ಉತ್ತೇಜನಗೊಳ್ಳುವವು.

-ಕಾಲು ಮತ್ತು ಕೈಗಳ ದುರ್ಬಲತೆ ದೂರವಾಗುವುದು.

-ಸಕ್ಕರೆ ಕಾಯಿಲೆ, ಮಲಬದ್ಧತೆ, ಅಜೀರ್ಣಕ್ಕೆ ಉತ್ತಮ ಆಸನವಿದು.

Categories: ನಾಟಿ ನಂಟು

Leave A Reply

Your email address will not be published.