ಸುವಿಚಾರ

ವಿಧಾಯ ವೈರಂ ಸಾಮರ್ಷೇ ನರೋರೌ ಯ ಉದಾಸತೇ |
ಪ್ರಕ್ಷಿಪ್ಯೋದರ್ಚಿಷಂ ಕಕ್ಷೇ ಶೇರತೇ ತೇಽಭಿಮಾರುತಮ್ ||

ದ್ವೇಷದಿಂದಿರುವ ವೈರಿರಾಜನಲ್ಲಿ ವೈರವನ್ನು ತೋರಿ ಮತ್ತೆ ಆ ವೈರಿಯ ವಿಷಯದಲ್ಲಿ ಯಾವ ರಾಜರು ಉದಾಸೀನರಾಗಿ ಇದ್ದುಬಿಡುವರೋ ಅವರು ಹುಲ್ಲಿನ ಬಣವೆಗೆ ಬೆಂಕಿಯಿಟ್ಟು ಎದುರಾಗಿ ಬೀಸುವ ಗಾಳಿಗೆ ಮೈಯೊಡ್ಡಿ ಮಲಗಿದಂತೆಯೇ ಸರಿ. ಹುಲ್ಲಿನ ರಾಶಿಗೆ ಬೆಂಕಿ ಕೊಟ್ಟು ಅದರ ಪಕ್ಕದಲ್ಲಿ ಮಲಗುವುದೆಂದರೆ ಮೃತ್ಯುವಿನ ಬಾಯಲ್ಲಿ ಮಲಗಿದಂತೆ. ವೈರಿಗಳನ್ನು ಕೆಣಕಿ ಸುಮ್ಮನೇ ಇದ್ದುಬಿಡುವುದು ಸಹ ಅಷ್ಟೇ ಅಪಾಯಕಾರಿ ಎಂದರ್ಥ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.