ಬೆನ್ನುನೋವು ನಿವಾರಣೆಗೆ ಮಾಡಿ ಅರ್ಧಕಟಿ ಚಕ್ರಾಸನ

ಅರ್ಧಕಟಿ ಚಕ್ರಾಸನ: ಸಮ ಸ್ಥಿತಿಯಲ್ಲಿ ನಿಂತುಕೊಂಡು ಪಾರ್ಶ್ವಕ್ಕೆ ಬಾಗುವ ಭಂಗಿಯಾಗಿದೆ. ಬೆನ್ನುನೋವಿನ ನಿಯಂತ್ರಣಕ್ಕೆ ಈ ಆಸನ ತುಂಬಾ ಸಹಕಾರಿಯಾಗಿದೆ. ಕಟಿ ಎಂದರೆ ಸೊಂಟ. ಅರ್ಧ ಚಕ್ರದ ಆಕಾರದಲ್ಲಿ ಸೊಂಟವನ್ನು ಬಾಗಿಸುವ ವಿಧಾನ. ಆದ್ದರಿಂದ ಈ ಆಸನಕ್ಕೆ ಅರ್ಧಕಟಿ ಚಕ್ರಾಸನ ಎಂದು ಹೆಸರು.

ಮಾಡುವ ಕ್ರಮ: ಮೊದಲು ತಾಡಾಸನದಲ್ಲಿ ನೆಲೆಸಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ಬಲಗೈಯನ್ನು ತಲೆಯ ಮೇಲೆ ನೇರವಾಗಿರಿಸಬೇಕು, ತೋಳುಗಳು ಬಲ ಕಿವಿಯನ್ನು ಸ್ಪರ್ಶಿಸಬೇಕು. ಎಡಗೈ ಎಡತೊಡೆಯ ಮೇಲೆ ನೇರವಾಗಿ ಇರಿಸಬೇಕು. ಅನಂತರ ಉಸಿರನ್ನು ಬಿಡುತ್ತ ನಿಧಾನವಾಗಿ ಎಡಬದಿಗೆ ಬಾಗಬೇಕು. ಸಮಸ್ಥಿತಿಯಲ್ಲಿ (20 ಸೆಕೆಂಡು) ಸಮ ಉಸಿರಾಟ. ಹಾಗೆ ಇನ್ನೊಂದು ಬದಿ ಅಭ್ಯಾಸ ಮಾಡಬೇಕು. ಈ ಆಸನವನ್ನು ಮೂರರಿಂದ ಆರು ಬಾರಿ ಅಭ್ಯಾಸ ಮಾಡಿ.

ಉಪಯೋಗಗಳು: ಇದೊಂದು ಸರಳ ಆಸನವಾಗಿದೆ. ಬೆನ್ನುನೋವು ಬಲುಬೇಗನೆ ನಿಯಂತ್ರಣವಾಗುತ್ತದೆ. ಭುಜಗಳ ಭಾಗ, ಕುತ್ತಿಗೆ ಭಾಗ ಬಲಗೊಳ್ಳುತ್ತದೆ. ಪಿತ್ತಕೋಶದ ಕಾರ್ಯ ಸಮರ್ಪಕವಾಗಿ ನಿರ್ವಹಿಸುತ್ತದೆ. ಸೊಂಟಕ್ಕೆ ಉತ್ತಮ ವ್ಯಾಯಾಮ ಒದಗಿ ಬರುತ್ತದೆ.

Categories: ನಾಟಿ ನಂಟು

Leave A Reply

Your email address will not be published.