ಮಿಕ್ಸ್ ತರಕಾರಿಗಳ ಬೋಂಡಾ ಮಾಡಿ ಸವಿಯಿರಿ


ಅಡುಗೆ ಮನೆ: ಮಳೆಗಾಲದಲ್ಲಿ ಬಜ್ಜಿ, ಪಕೋಡಾ, ಬೋಂಡಾಗಳನ್ನು ಮಾಡಿ ತಿನ್ನುವ ಖುಷಿಯೇ ಬೇರೆ. ಅದರಲ್ಲೂ ವೆರೈಟಿ ರೀತಿಯ ಬೋಂಡಾಗಳನ್ನು ಮಾಡುತ್ತಾರೆ. ಅದೇ ರೀತಿ ಮಿಕ್ಸ್ ವೆಜ್‍ಗಳನ್ನು ಹಾಕಿ ಬೋಂಡಾ ಮಾಡುವ ವಿಧಾನ ತಿಳಿಯೋಣ

ಬೇಕಾಗುವ ಸಾಮಗ್ರಿಗಳು: ಸಣ್ಣಗೆ ಹೆಚ್ಚಿದ ಕ್ಯಾಬೇಜ್, ಕ್ಯಾರೇಟ್, ಬೀನ್ಸ್, ಈರುಳ್ಳಿ ತಲಾ ಅರ್ಧ ಬಟ್ಟಲು, ಕಡಲೆ ಹಿಟ್ಟು-1 ಬಟ್ಟಲು, ಅಕ್ಕಿ ಹಿಟ್ಟು-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಹಸಿ ಮೆಣಸಿನಕಾಯಿ ಪೇಸ್ಟ್-1 ಚಮಚ, ಅರಶಿನ ಪುಡಿ-1 ಚಿಟಿಕೆ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೇಲಿನ ಎಲ್ಲಾ ಸಾಮಗ್ರಿಗಳನ್ನು ಪಾತ್ರೆಗೆ ಹಾಕಿ ಸ್ವಲ್ಪ ಸ್ವಲ್ಪ ಸೇರಿಸಿ, ಸ್ವಲ್ಪ ಬಿಸಿ ಎಣ್ಣೆ ಹಾಕಿ ಗಟ್ಟಿಯಾಗಿ ಕಲಸಿ. ನಂತರ ಅದನ್ನು ಸಣ್ಣ- ಸಣ್ಣ ಉಂಡೆಗಳನ್ನಾಗಿ ಮಾಡಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.

Categories: ಅಡುಗೆ ಮನೆ

Leave A Reply

Your email address will not be published.