ಉಷ್ಟ್ರಾಸನದಿಂದ ಏನೆಲ್ಲಾ ಲಾಭವಿದೆ ತಿಳಿಯಿರಿ

ಉಷ್ಟ್ರಾಸನ: ಉಷ್ಟ್ರಾಸನಕ್ಕೆ ಜಾನು ಪೃಷ್ಠವಲಿ ಶಾಸನ ಎಂಬ ಹೆಸರೂ ಇದೆ.

ಮಾಡುವ ಕ್ರಮ: 1) ಮೊದಲು ನೇರವಾಗಿ, ಲಂಬವಾಗಿ ನಿಲ್ಲಬೇಕು.

2) ಅನಂತರ ಮೊಣಕಾಲೂರಿ ಕುಳಿತುಕೊಳ್ಳಬೇಕು.

3) ಉಸಿರನ್ನು ಹೊರಕ್ಕೆ ದೂಡುತ್ತಾ ನಿಧಾನವಾಗಿ ಹಿಂದಕ್ಕೆ ( ಸೊಂಟದ ಮೇಲಿನ ಶರೀರವನ್ನು) ಬಾಗಬೇಕು. ಈ ಸ್ಥಿತಿಯಲ್ಲಿ ಕತ್ತನ್ನು ಸಹ ಆದಷ್ಟು ಹಿಂದಕ್ಕೆ ಬಗ್ಗಿಸಬೇಕು.

4) ಸಾಧ್ಯವಾದಷ್ಟು ಬೆನ್ನನ್ನು ಹಿಂದಕ್ಕೆ ಬಗ್ಗಿಸಿ ಚಿತ್ರದಲ್ಲಿ ತೋರಿಸುವಂತೆ ಕೈಗಳಿಂದ ಭೂಮಿಯನ್ನು ಸ್ವರ್ಶಿಸಬೇಕು.

5) ಈ ಸ್ಥಿತಿಯಲ್ಲಿ ಬೆನ್ನು ಬಿಲ್ಲಿನಂತೆ ಬಗ್ಗಿರುತ್ತದೆ. ಇದೇ ಸ್ಥಿತಿಯಲ್ಲಿ ಆರೆಂಟು ಬಾರಿ ದೀರ್ಘವಾಗಿ ಉಸಿರಾಡಿ ಅನಂತರ ಯಥಾಸ್ಥಿತಿಗೆ ಬರಬೇಕು. ಹಿಂದಕ್ಕೆ ಬಾಗುವಾಗ ಹೆಚ್ಚಿನ ಜಾಗರೂಕತೆಯನ್ನು ವಹಿಸುವುದು ಉತ್ತಮ.

ಲಾಭಗಳು: ಉಷ್ಟ್ರಾಸನದ ಅಭ್ಯಾಸದಿಂದ ತೊಡೆ, ಸೊಂಟ, ಹೊಟ್ಟೆ, ಕುತ್ತಿಗೆ ಹೆಚ್ಚು ಸದೃಢವಾಗುವವು. ಹರ್ನಿಯ, ಆಪೆಂಡಿಸೈಟಸ್ ನಿಂದ ನರಳುವವರಿಗೆ ಉಷ್ಟ್ರಾಸನವು ಉಪಕಾರಿ ಮತ್ತು ಗೂನುಬೆನ್ನು ಸಹ ಇದರಿಂದ ಸ್ವಲ್ಪಮಟ್ಟಿಗೆ ನಿವಾರಣೆಯಾಗುವುದು.

Categories: ನಾಟಿ ನಂಟು

Leave A Reply

Your email address will not be published.