ಮಲೆನಾಡಿನ ವಿಶೇಷ ಅಡುಗೆ ಹಲಸಿನ ಹಣ್ಣಿನ ಕಡುಬು ಸವಿದು ನೋಡಿ


ಅಡುಗೆ ಮನೆ: ಮಲೆನಾಡಿನ ವಿಶೇಷ ಅಡುಗೆಯ ಸಾಲಿನಲ್ಲಿ ಹಲಸಿನ ಖಾದ್ಯಗಳು ವಿಷೇಶ ಪಾತ್ರ ವಹಿಸುತ್ತದೆ. ಇದರಿಂದ ಮಲೆನಾಡಿಗರು ಹಪ್ಪಳ, ಹುಳಿ, ಪಲ್ಯ ಇತ್ಯಾದಿ ರುಚಿಕರ ತಿಂಡಿಗಳನ್ನು ಮಾಡಿ ಸವಿಯುತ್ತಾರೆ. ಅದೇ ರೀತಿ ಹಲಸಿನ ಹಣ್ಣಿನಿಂದ ಮಾಡುವ ಸಿಹಿ ಖಾದ್ಯ ಕಡುಬು ತುಂಬಾ ವಿಶೇಷದ್ದು, ಅದನ್ನು ಮಾಡುವ ವಿಧಾನವನ್ನು ತಿಳಿಯೋಣ

ಬೇಕಾಗುವ ಸಾಮಗ್ರಿಗಳು: ಅಕ್ಕಿ-2 ಕಪ್‌, ಬೆಲ್ಲ-1 ಕಪ್‌, ಹಲಸಿನ ಹಣ್ಣಿನ ತೊಳೆ-25, ತೆಂಗಿನಕಾಯಿ ತುರಿ-1 ಕಪ್‌, ಸಾಗುವಾನಿ ಎಲೆ ಅಥವಾ ಬಾಳೆ ಎಲೆ-15, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಿಡಿ. ಹಲಸಿನ ಹಣ್ಣಿನ ತೊಳೆಯನ್ನು ಚಿಕ್ಕದಾಗಿ ಹೆಚ್ಚಿಡಿ. ಅಕ್ಕಿಯನ್ನು ನೀರಿನಿಂದ ಬಸಿದು ಹಲಸಿನ ತೊಳೆ, ಕಾಯಿತುರಿ, ಬೆಲ್ಲ, ಉಪ್ಪು ಹಾಕಿ ನೀರು ಸೇರಿಸದೆ ನುಣ್ಣಗೆ ರುಬ್ಬಿ. ಈ ಹಿಟ್ಟನ್ನು ಸಾಗುವಾನಿ ಎಲೆ ಅಥವಾ ಬಾಳೆ ಎಲೆಯಲ್ಲಿಟ್ಟು ನಾಲ್ಕು ಬದಿಯಲ್ಲಿ ಮಡಚಿ ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿ. ಬೆಂದ ನಂತರ ಈ ಕಡುಬು ಕೆಂಬಣ್ಣ ಬಂದಿರುತ್ತದೆ. ಇದನ್ನು ತುಪ್ಪ, ಬೆಣ್ಣೆ ಅಥವಾ ಜೇನುತುಪ್ಪದೊಂದಿಗೆ ಸವಿಯಿರಿ. ಬಾಳೆ ಎಲೆಗಳು ಸಿಗದಿದ್ದರೆ ಇಡ್ಲಿ ಕಪ್‌ನಿಂದ ಮಾಡಬಹುದು.

Categories: ಅಡುಗೆ ಮನೆ

Leave A Reply

Your email address will not be published.