ದೃಷ್ಟಿ ಸಮಸ್ಯೆ ನಿವಾರಣೆಗೆ ಉತ್ತಾನ ಪಾದಾಸನ


ಅರ್ಥ: ಉತ್ತಾನ ಎಂದರೆ ಹಿಗ್ಗಿಸುವುದು ಎಂದರ್ಥ ಪಾದವನ್ನು ಮುಂದೆ ಹಿಗ್ಗಿಸಿ ಮೇಲೆತ್ತುವ ಈ ಆಸನಕ್ಕೆ ಉತ್ತಾನ ಪಾದಾಸನ ಎಂದು ಹೆಸರು.

ಮಾಡುವ ವಿಧಾನ: ಮೊದಲು ಹಿಂದಕ್ಕೆ ಮಲಗಿ ಎರಡು ಕಾಲುಗಳನ್ನು ಮುಂದೆ ಚಾಚಿ. ಈಗ ಎರಡು ಹಸ್ತಗಳನ್ನು ಭುಜಗಳ ಹತ್ತಿರ ತೆಗೆದುಕೊಂಡು ಬಂದು ಪರ್ಯಂಕಾಸನದ ರೀತಿಯಲ್ಲಿ ಬೆನ್ನನ್ನು ಮೇಲಕ್ಕೆ ಎತ್ತಿ. ಎರಡು ಕಾಲುಗಳನ್ನು 60 ಡಿಗ್ರಿಯಷ್ಟು ಮೇಲಕ್ಕೆ ಎತ್ತಿ, ಎರಡು ಕೈಗಳನ್ನು ಮುಂದೆ ಚಾಚಿ ತಲೆಯ ನೆತ್ತಿಯನ್ನು ನೆಲಕ್ಕೆ ತಾಗಿಸಿ. ಕೇವಲ ತಲೆಯ ನೆತ್ತಿ ಮತ್ತು ಪೃಷ್ಠದ ಮೇಲೆ ಶರೀರದ ಭಾರವಿರಬೇಕು. ಹಾಗೆ ನಿಧಾನವಾಗಿ ಕಾಲುಗಳನ್ನು ಮೇಲಕ್ಕೆ ಎತ್ತಿ ಬೆನ್ನು ನೆಲಕ್ಕೆ ತಾಗಿಸಬೇಕು. ನಂತರ ಮೊಣಕೈಗಳನ್ನು ನೆಲಕ್ಕೆ ಒತ್ತುವುದರ ಮೂಲಕ ಅಥವಾ ಬಲಮಗ್ಗುಲಿಗೆ ಹೊರಳಿ ಮೇಲಕ್ಕೆ ಬನ್ನಿ.

ಉಪಯೋಗ: -ಎದೆಯ ಭಾಗ ಹಿಗ್ಗಲ್ಪಡುವುದು.

-ಉಸಿರಾಟ ಕ್ರಿಯೆ ದೀರ್ಘವಾಗುವುದು.

-ನಾಭಿಯ ಭಾಗ ಮತ್ತು ಕುತ್ತಿಗೆಯ ಭಾಗ ಹುರುಪುಗೊಳ್ಳುವುದು.

-ಬೆನ್ನು ಮೂಳೆಗಳು ಚೈತನ್ಯಗೊಳ್ಳುವವು.

-ದೃಷ್ಟಿ ಸಮಸ್ಯೆ ಇರುವವರಿಗೆ ಮತ್ತು ಥೈರಾಯ್ಡ್ ಸಮಸ್ಯೆ ಇರುವವರಿಗೂ ಉತ್ತಮ ಆಸನವಿದು.

Categories: ನಾಟಿ ನಂಟು

Leave A Reply

Your email address will not be published.