ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಎನ್.ಎಸ್. ಲಮಾಣಿ ಆಯ್ಕೆ


ಗೋಕರ್ಣ: ಲಯನ್ಸ ಕ್ಲಬ್ 2019-20 ನೇ ಸಾಲಿನ ನೂತನ ಅಧ್ಯಕ್ಷರಾಗಿ ಲಾ. ಎನ್.ಎಸ್. ಲಮಾಣಿ, ಕಾರ್ಯದರ್ಶಿಯಾಗಿ ಲಾ. ಅನಿಲ ಶೇಟ್, ಖಜಾಂಚಿಯಾಗಿ ಲಾ. ದೀಪಕ ಅಡ್ಪೇಕರ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಪದಗ್ರಹಣ ಕ್ರಾರ್ಯಕ್ರಮ ಜೂ. 30ರಂದು ಹೊಟೇಲ್ ಗೋಕರ್ಣ ಇಂಟರ್ ನ್ಯಾಶನಲ್ ಸಭಾ ಭವನದಲ್ಲಿ ನಡೆಯಲಿದೆ. ಸೆಕೆಂಡ್ ವೈಸ್ ದಿಸ್ಟಿಕ್ ಗವರ್ನರ್ ಪಿ.ಎಮ್.ಜೆ. ಶ್ರೀಕಾಂತ ಮೋರೆ ಪ್ರಮಾಣ ವಚನ ಬೋಧಿಸಲಿದ್ದು, ಮುಖ್ಯ ಅಥಿತಿಗಳಾಗಿ ಅಂಕೋಲಾ ಜೆ.ಸಿ.ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಶೈಲಜಾ ಭಟ್ ಆಗಮಿಸಲಿದ್ದಾರೆ. ಪಿ.ಡಿ.ಜಿ.ಲಾ. ಗಣಪತಿ ನಾಯಕ, ಸಂಸ್ಥಾಪಕ ಸದಸ್ಯ ಡಾ. ವಿ.ಆರ್. ಮಲ್ಲನ್ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದೆ ಎಂದು ಅಧ್ಯಕ್ಷರಾದ ಲಾ.ಜೆ.ಕೆ.ಹೆಗಡೆ ಹಾಗೂ ಕಾರ್ಯದರ್ಶಿ ಅಮಿತ್ ಗೋಕರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.