ಮಲೆನಾಡಿನ ವಿಶೇಷ ಅಡುಗೆ ಕೆಸುವಿನ ಸೊಪ್ಪಿನ ಕರಕಲಿ ಮಾಡಿ ನೋಡಿ

ಅಡುಗೆ ಮನೆ: ಮಲೆನಾಡಿನ ಭಾಗದಲ್ಲಿ ಮಳೆಗಾಲದಲ್ಲಿ ವಿಶೇಷವಾದ ಅಡುಗೆಯನ್ನು ಮಾಡುತ್ತಾರೆ. ಅದೇ ರೀತಿ ಕೆಸುವಿನ ಸೊಪ್ಪಿನ ಕರಕಲಿಯೂ ಒಂದು. ಅದನ್ನು ಮಾಡುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಗಿಗಳು: 10-15 ಕೆಸುವಿನ ಸೊಪ್ಪು, ಬೆಳ್ಳುಳ್ಳಿ, ಓಮು, ಉಪ್ಪು, ಹುಳಿಗೆ ಲಿಂಬು, ಹಸಿಮೆಣಸು

ಮಾಡುವ ವಿಧಾನ: ಮೊದಲು ಕೆಸುವಿನ ಸೊಪ್ಪನ್ನು ತೊಳೆದು ಒಣಗಿಸಿಕೊಳ್ಳಿ. ಹಸಿ ಇರುವಾಗ ಕತ್ತರಿಸಿದರೆ ತುರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ನಂತರ ಸೊಪ್ಪನ್ನು ಉಪ್ಪು, ಹುಳಿ, ಹಸಿಮೆಣಸಿನ ಪೇಸ್ಟ್ ಹಾಕಿ ಬೇಯಿಸಿ. ಲಿಂಬು ಇಲ್ಲವಾದಲ್ಲಿ ಅಮಟೆಕಾಯಿ ಕೂಡ ಬಳಸಬಹುದು. ಕೆಸುವಿನ ಸೊಪ್ಪು ಚೆನ್ನಾಗಿ ಬೆಂದ ನಂತರ ಅದಕ್ಕೆ ಓಮು, ಬೆಳ್ಳುಳ್ಳಿಯ ಒಗ್ಗರಣೆ ಹಾಕಿ. ಒಗ್ಗರಣೆಗೆ ಎಣ್ಣೆ ತುಸು ಜಾಸ್ತಿ ಇದ್ದಲ್ಲಿ ಕರಕಲಿಯ ರುಚಿ ಹೆಚ್ಚು. ಬೇಸಿಗೆಯಲ್ಲಿ ಈ ಕರಕಲಿ ತಯಾರಿಸುವುದು ಒಳಿತಲ್ಲ. ಏಕೆಂದರೆ ಬೇಸಿಗೆಯಲ್ಲಿ ಇದನ್ನು ಸೇವಿಸಿದರೆ ಗಂಟಲಿನ ತುರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ ಮತ್ತೆ ಕೆಲವರಿಗೆ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.

Categories: ಅಡುಗೆ ಮನೆ

Leave A Reply

Your email address will not be published.