ಕಳ್ಳತನ ಆರೋಪಿಗಳ ಬಂಧನ: ಶಿರಸಿ ಪೋಲಿಸರ ಯಶಸ್ವಿ ಕಾರ್ಯಾಚರಣೆ

ಶಿರಸಿ: ತಾಲೂಕಿನ ಎಕ್ಕಂಬಿಯ ರೈಸ್ ಮಿಲ್ ಎದುರು ನಿಲ್ಲಿಸಿಟ್ಟಿದ್ದ ಮಹೇಂದ್ರ ಪಿಕ್ ಅಪ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಮೂರು ಆರೋಪಿಗಳನ್ನು ಬಂಧಿಸಿದ್ದು, ವಾಹನವನ್ನು ಜಪ್ತಿ ಮಾಡಲಾಗಿದೆ.

ಶಿವಮೊಗ್ಗದ ಶಿಕಾರಿಪುರದ ಜಿಯಾವುಲ್ಲಾ ಸಾಬ್(55), ಫಾಸಿಲ್ ಅಹಮ್ಮದ್ ಖಾನ್(24), ಬರ್ಕತ್ ಅಲಿ ಸಾಬ್(35) ಬಂಧಿತ ಆರೋಪಿಗಳಾಗಿದ್ದಾರೆ. ಶಫಿ ಹುಸೇನ್ ಸಾಬ(36) ತಲೆ ಮರೆಸಿಕೊಂಡ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಎಕ್ಕಂಬಿಯ ಜಯರಾಮ ನಾಯಕ ಎಂಬುವರ ಮಹೇಂದ್ರ ಪಿಕ್ ಅಪ್ ವಾಹನವನ್ನು( ಕೆಎ 22, ಬಿ 0282 ) ನಾಲ್ವರು ಕಳ್ಳರು ಸೇರಿ ಕಳೆದ ಮೇ.13 ರಂದು ಮನೆಗೆ ತಾಗಿಕೊಂಡಿರುವ ರೈಸ್ ಮಿಲ್ ಎದುರಿನಿಂದ ಅಪರಿಸಿದ್ದರು. ಪ್ರಕರಣ ದಾಖಲಸಿಕೊಂಡು ತನಿಖೆ ನಡೆಸಿದ್ದ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.