ಸುವಿಚಾರ

ಶರೀರಸ್ಯ ಗುಣಾನಾಂ ಚ ದೂರಮತ್ಯಂತಮಂತರಮ್
ಶರೀರಂ ಕ್ಷಣವಿಧ್ವಂಸಿ ಕಲ್ಪಾಂತಸ್ಥಾಯಿನೋ ಗುಣಾಃ ||

ಗುಣಗಳು (ಸಂಸ್ಕೃತದಲ್ಲಿ ಗುಣಗಳು ಅಂದರೇನೆ ಸದ್ಗುಣಗಳು ಎಂದರ್ಥ) ಪೂಜ್ಯವಾದವುಗಳು. ವ್ಯಕ್ತಿಯೊಬ್ಬ ಅಂತಃಸತ್ತ್ವವನ್ನು ನಿರ್ಧರಿಸುವವು ಗುಣಗಳೇ ಹೊರತು ಆ ವ್ಯಕ್ತಿಯ ಶಾರೀರಿಕ ತೋರಿಕೆಯಲ್ಲ. ಹಾಗಾಗಿ ಶರೀರ ಮತ್ತು ಗುಣಗಳ ಮಧ್ಯೆ ಅಜಗಜಾಂತರವಿದೆ. ಶರೀರವಾದರೋ ಕ್ಷಣಿಕವಾದ್ದು. (ಶೀರ್ಯಂತೇ ಇತಿ ಶರೀರಾಣಿ – ನಾಶವಾಗುತ್ತವಾದ್ದರಿಂದ ಶರೀರ ಎಂಬ ಹೆಸರು ನಿಂತಿದೆ). ಆದರೆ ಅದಕ್ಕೆ ವಿರೋಧವೆಂಬಂತೆ ಗುಣಗಳು ಕಲ್ಪಾಂತದವರೆಗೂ ಉಳಿದುಕೊಳ್ಳುವ ಸಾಮರ್ಥ್ಯ ಹೊಂದಿವೆ. ರಾಮನ ಗುಣಗಳನ್ನು ಅವನ ಕಾಲದ ಬಳಿಕವೂ ಅದೆಷ್ಟೋ ಕಲ್ಪಗಳೇ ಸವೆದುಹೋಗಿದ್ದರೂ ಇವತ್ತಿಗೂ ಸ್ಮರಿಸಿಕೊಳ್ಳುವುದಿಲ್ಲವೇ? ಹಾಗೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.