ಸಖತ್ ಟೇಸ್ಟಿ ಮಾವಿನಕಾಯಿ ಮಸಾಲಾ ರೈಸ್


ಅಡುಗೆ ಮನೆ: ಬೆಳಗಿನ ಬ್ರೇಕ್ ಫಾಸ್ಟ್ ರುಚಿ ಹೆಚ್ಚಿಸಲು ಒಮ್ಮೆ ಮಾಡಿ ನೋಡಿ ಮಾವಿನಕಾಯಿ ಮಸಾಲಾ ರೈಸ್ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು: ತುರಿದ ಮಾವಿನಕಾಯಿ 1 ಬಟ್ಟಲು, ಈರುಳ್ಳಿ 2, ಹಸಿಮೆಣಸಿನಕಾಯಿ 4, ಬ್ಯಾಡಗಿ ಮೆಣಸಿನಕಾಯಿ 2, ತುರಿದ ತೆಂಗಿನಕಾಯಿ 3 ಟೀ ಸ್ಪೂನ್, ಕರಿಬೇವು ಸ್ವಲ್ಪ, ಶುಂಠಿ 1/2 ಇಂಚು, ಕಡಲೆ ಬೀಜ 3 ಟೀ ಸ್ಪೂನ್, ಕಡಲೆ ಬೇಳೆ 1 ಟೀ ಸ್ಪೂನ್, ಉದ್ದಿನ ಬೇಳೆ 1 ಟೀ ಸ್ಪೂನ್, ಅರಿಶಿಣ ಪುಡಿ 1/2 ಟೀ ಸ್ಪೂನ್, ಜೀರಿಗೆ 1 1/2 ಟೀ ಸ್ಪೂನ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಇಂಗು ಚಿಟಿಕೆ, ಸಾಸಿವೆ 1/2 ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ

ಮಾಡುವ ವಿಧಾನ: ಮೊದಲಿಗೆ ಅನ್ನ ತಯಾರಿಸಿ ಕೊಳ್ಳಬೇಕು. ಮಿಕ್ಸಿ ಜಾರಿಗೆ ಶುಂಠಿ, ಹಸಿಮೆಣಸಿನಕಾಯಿ, ತೆಂಗಿನ ಕಾಯಿ, ಉಪ್ಪು, ಅರ್ಧ ಚಮಚ ಜೀರಿಗೆ ಹಾಕಿ ರುಬ್ಬಿಕೊಳ್ಳಬೇಕು. ಕಡಾಯಿಗೆ ಎಣ್ಣೆ ಹಾಕಿ ಕಡಲೆ ಬೇಳೆ, ಉದ್ದಿನ ಬೇಳೆ, ಕಡಲೆ ಬೀಜ ಹಾಕಿ ಫ್ರೈ ಮಾಡಿ. ಸಾಸಿವೆ, ಬ್ಯಾಡಗಿ ಮೆಣಸಿನಕಾಯಿ, ಉಳಿದ ಜೀರಿಗೆ, ಕರಿಬೇವು, ಅರಿಶಿಣ ಪುಡಿ ಹಾಕಿ ಬಾಡಿಸಿ. ನಂತರ ರುಬ್ಬಿಕೊಂಡಿರುವ ಪೇಸ್ಟ್ ಹಾಗೂ ತೆಂಗಿನ ತುರಿ ಹಾಕಿ ಕೈಯಾಡಿಸಿ. ಬಳಿಕ ಈರುಳ್ಳಿ, ಉಪ್ಪು, ಇಂಗು ಹಾಕಿ ಕೆದಕಿ. ತುರಿದಿಟ್ಟ ಮಾವಿನಕಾಯಿ ಹಾಕಿ ಸ್ವಲ್ಪ ಹೊತ್ತು ಬಾಡಿಸಿ. ಈಗ ಮಸಾಲಾ ರೆಡಿ. ಸಿದ್ಧಗೊಂಡಿರುವ ಮಸಾಲವನ್ನು ಅನ್ನದೊಂದಿಗೆ ಕಲಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ರುಚಿ ನೋಡಿ

Categories: ಅಡುಗೆ ಮನೆ

Leave A Reply

Your email address will not be published.