ತದಡಿಯಲ್ಲಿ ಮಲೇರಿಯಾ ಮಾಸಾಚರಣೆ ಕಾರ್ಯಾಕ್ರಮ

ಗೋಕರ್ಣ: ಉತ್ತರ ಕನ್ನಡ ಜಿಲ್ಲಾ ಪಂಚಾಯತ, ಆರೋಗ್ಯ ಇಲಾಖೆ ಕುಮಟಾ ಹಾಗೂ ತಾಲೂಕ ಪಂಚಾಯತ ಕುಮಟಾ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತದಡಿಯಲ್ಲಿ ಮಲೇರಿಯಾ ರೋಗ ನಿವಾರಣೆಗಾಗಿ ‘ಮಲೇರಿಯಾ ಮಾಸಾಚರಣೆ’ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ತಾಲೂಕ ವೈದ್ಯಾಧಿಕಾರಿ ಡಾ. ಆಜ್ಞಾ ನಾಯಕ ರೋಗ ಬರದಂತೆ ಮುಂಜಾಗ್ರತೆ ಕ್ರಮ, ಮತ್ತು ಸುತ್ತಲಿನ ಪರಿಸರ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ, ತಾ. ಪಂ. ಸದಸ್ಯ ಮಹೇಶ ಶೆಟ್ಟಿ, ಗ್ರಾಂ. ಪಂ. ಅಧ್ಯಕ್ಷೆ ಮಹಾಲಕ್ಷ್ಮೀ ಭಡ್ತಿ, ಮೇಲ್ವಿಜಾರಕಿ ಶೈಲಜಾ ಭಂಡಾರಿ, ಭಾರತಿ ನಾಯಕ, ಗೀತಾ ಗುನಗಾ, ಮಹಂತೇಶ ಹೂಗಾರ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮೀನುಗಾರಿಕಾ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಬಂದರಿನಲ್ಲಿ ಕೆಲಸಕ್ಕಾಗಿ ವಲಸೆ ಬಂದ ಕಾರ್ಮಿಕರು ಪಾಲ್ಗೊಂಡಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.