ಯಶಸ್ವಿಯಾದ ಯೋಗ ಜಾಗೃತಿ ಜಾಥಾ: ಸಹಸ್ರ ಸಂಖ್ಯೆಯಲ್ಲಿ ಜನರು ಭಾಗಿ


ಶಿರಸಿ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತವಾಗಿ ಜೂ.20ರಂದು ನಗರದ ಮಾರಿಕಾಂಬಾ ಕಾಲೇಜು ಆವಾರದಲ್ಲಿ ಸಾಮೂಹಿಕ ಯೋಗಾಭ್ಯಾಸ ಹಾಗೂ ಯೋಗ ಪ್ರದರ್ಶನ ಹಾಗೂ ಯೋಗದ ಪ್ರಯೋಜನದ ಕುರಿತು ಜನಜಾಗೃತಿ ಮೂಡಿಸಲು ಸಂಘಟಿಸಲಾಗಿದ್ದ ಯೋಗ ಜಾಥಾ ಯಶಸ್ವಿಯಾಗಿ ನೆರವೇರಿತು.

ಶಿರಸಿ ಉಪ ವಿಭಾಗದ ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾರಿಕಾಂಬಾ ಪ.ಪೂ. ಕಾಲೇಜಿನ ಆವರಣದಲ್ಲಿ ಪ್ರಾರಂಭಗೊಂಡ ಯೋಗ ಜಾಥಾಕ್ಕೆ ನಿಶಾನೆ ತೋರಿ ಚಾಲನೆ ನೀಡಿದರು. ಜಾಥಾವು ಮುಂದೆ ಅಶ್ವಿನಿ ವೃತ್ತ-ಹೊಸಪೇಟೆ ರಸ್ತೆ-ದೇವಿಕೆರೆ-ನಟರಾಜ ರಸ್ತೆ-ಪ್ರಭು ಪೆಟ್ರೋಲ್ ಬಂಕ್-ಶಿವಾಜಿ ಸರ್ಕಲ್-ಅಂಚೆ ವೃತ್ತ-ಸಿ.ಪಿ.ಬಝಾರ್-ಝೂ ಸರ್ಕಲ್ ಮಾರ್ಗವಾಗಿ ಸಂಚರಿಸಿ ಪುನಃ ಮಾರಿಕಾಂಬಾ ಕಾಲೇಜನ್ನು ತಲುಪಿದ ಸುಮಾರು 5 ಕಿ.ಮೀ. ಕ್ರಮಿಸಿತ್ತು. ಜಥಾದ ಪ್ರಾರಂಭದಿಂದ ಕೊನೆಯವರೆಗೂ ಸಹಾಯಕ ಆಯುಕ್ತರು ಹಾಗೂ ಜಿ.ಪಂ. ಸದಸ್ಯೆ ಉಷಾ ಹೆಗಡೆ ಜೊತೆ ಇದ್ದುದು ಒಂದು ವಿನೂತನ ದಾಖಲೆಯೇ ಆಗಿತ್ತು.

ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಮತ್ತು ಶಾಲಾ- ಕಾಲೇಜು ವಿದ್ಯಾರ್ಥಿಗಳು ಮಳೆಯನ್ನೂ ಲೆಕ್ಕಿಸದೆ ನಡಿಗೆಯಲ್ಲಿ ಮುನ್ನಡೆದರು. ಈ ಸಂದರ್ಭದಲ್ಲಿ ಡಾ. ದಿನೇಶ ಹೆಗಡೆ, ಇಂಟಟ ಅನಿಲ ಕರಿ, ಶಿಕ್ಷಣ ಇಲಾಖೆಯ ಭಂಡಾರಿ, ಐ.ಡಿ.ಎ. ಅಧ್ಯಕ್ಷೆ ಡಾ. ಅರ್ಪಣಾ ಹೆಗಡೆ, ಐ.ಎಂ.ಎ. ಅಧ್ಯಕ್ಷೆ ಡಾ. ತನುಶ್ರೀ ಹೆಗಡೆ ಮತ್ತು ಕಾರ್ಯದರ್ಶಿ ಡಾ. ಮಂಜುನಾಥ, ಲಟಟ ಶ್ರೀಕಾಂತ ಹೆಗಡೆ, ಪ್ರಕಾಶ ನೇತ್ರಾವಳಿ, ಜಿ.ವಿ. ಭಟ್, ಜನಾರ್ಧನಾಚಾರ್ಯ ಶರ್ಮ, ಮಂಗಳಗೌರಿ ಭಟ್, ರೊಟಟ ರವಿ ಹೆಗಡೆ ಗಡಿಹಳ್ಳಿ, ರೊಟಟ ಗಣೇಶ ಶೇಟ್, ಶ್ರೀಮತಿ ಪರ್ವತೀಕರ, ಮಾರಿಕಾಂಬಾ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು, ಸಂಘಟಕ ಸಂಸ್ಥೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.