ಜೂ.24 ಕ್ಕೆ ’ಮಲೆನಾಡು ಮೇಳ- 2019, ಪ್ರದರ್ಶನ ಮತ್ತು ಮಾರಾಟ ಮೇಳ’

ಶಿರಸಿ: ನಗರದ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಜೂ.24ರ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ 6 ಗಂಟೆಯವರೆಗೆ ’ಮಲೆನಾಡು ಮೇಳ- 2019, ಪ್ರದರ್ಶನ ಮತ್ತು ಮಾರಾಟ ಮೇಳ’ವನ್ನು ಆಯೋಜಿಸಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಡಾ. ವಾಸುದೇವ, ಅರಣ್ಯ ವಿದ್ಯಾಲಯ, ಶಿರಸಿ ಇವರು ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಜಲತಜ್ಞ ಶಿವಾನಂದ ಕಳವೆ ಉಪಸ್ಥಿತರಿರುವರು. ವನಸ್ತ್ರೀ ಟ್ರಸ್ಟಿ ಸುನೀತಾ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವನಸ್ತ್ರೀ ಇವರ ಆಯೋಜನೆಯಲ್ಲಿ ಕಾರ್ಯಕ್ರಮ ಸಂಘಟಿಸಿದ್ದು, ರೈತ ಮಹಿಳೆಯರ ಸಬಲೀಕರಣದ ಉದ್ದೇಶದಿಂದ 16 ನೇ ವರ್ಷದ ಮಲೆನಾಡು ಮೇಳವನ್ನು ಆಯೋಜಿಸಿದೆ.

ವಿಶೇಷತೆಗಳು: ಮೇಳದಲ್ಲಿ ಅಡವಿಯ ತರಕಾರಿ,ಕಿರು ಅರಣ್ಯ ಉತ್ಪನ್ನಗಳಿಂದ ತಯಾರಿಸುವ, ” ಅಡವಿ ಆಹಾರದ ಅಡುಗೆ ಸ್ಪರ್ಧೆ” ಏರ್ಪಡಿದೆ. ಹಾಗೆಯೇ ನಾಟಿ ತರಕಾರಿ ಬೀಜಗಳು, ಹಣ್ಣು- ಹೂವಿನ ಬೀಜಗಳು ಮತ್ತು ಗಿಡಗಳು, ಪರೂಪದ ತಿಂಡಿ ತಿನಿಸು, ಕರಕುಶಲ ವಸ್ತು, ಅಡವಿ ಆಹಾರ ಅಡುಗೆ ಸ್ಪರ್ಧೆ, ಅಡವಿ ಸಸ್ಯಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿದೆ. ಸಂಜೆ 4 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.

ಟೀಡ್ ಸಂಸ್ಥೆ ಯಲ್ಲಾಪುರ, ನಮ್ಮ ಭೂಮಿ ಕುಂದಾಪುರ, ಸ್ನೇಹಕುಂಜ ಹೊನ್ನಾವರ ಇವರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಶೈಲಜಾ ಗೋರನಮನೆ ಮೊ.9845070343 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.