ಕಾಲಿನ ಬಲವರ್ಧನೆಗೆ ತ್ರಿಕೋನಾಸನ

ತ್ರಿಕೋನಾಸನ: ಆಸನದ ಹೆಸರೇ ಹೇಳುವಂತೆ ಇದೊಂದು ಮೂರು ಕೋನಗಳನ್ನು ಉಳ್ಳಂತಹ ಆಸನ. ಮೂರು ಕೋನಗಳನ್ನೊಳಗೊಂಡ ಮೂರು ತ್ರಿಕೋನಗಳಿರುವಂತಹ ಆಸನ ತ್ರಿಕೋನಾಸನ.

ಮಾಡುವ ವಿಧಾನ: ಮೊದಲು ಎರಡು ಪಾದಗಳ ಅಂತರವನ್ನು ಮೂರುವರೆಯಿಂದ ನಾಲ್ಕು ಅಡಿಗಳಷ್ಟು ಇಡಿ. ಬಲಪಾದವನ್ನು ಬಲಕ್ಕೆ ತಿರುಗಿಸಿ. ಬಲಗಾಲಿನ ಹಿಮ್ಮಡಿಯನ್ನು ಸ್ಪಲ್ಪ ಒಳಗೂ ಕಾಲಿನ ಬೆರಳುಗಳನ್ನು ಸ್ವಲ್ಪ ಹೊರಗೂ ಹಿಂದೆ ಇರುವಂತಹ ಪಾದದ ಒಳ ಅಂಚಿನ ಮಧ್ಯದ ಭಾಗಕ್ಕೆ ಬಲಗಾಲಿನ ಹಿಮ್ಮಡಿ ಬರುವಂತೆ ಇಟ್ಟುಕೊಳ್ಳಿ. ಈಗ ಎರಡೂ ಕೈಗಳನ್ನು ಮೇಲಕ್ಕೆ ತೆಗೆದುಕೊಂಡು ಭುಜದ ನೇರಕ್ಕೆ ಚಾಚಿ. ಉಸಿರನ್ನು ತೆಗೆದುಕೊಂಡು ಉಸಿರನ್ನು ಹೊರ ಹಾಕುತ್ತ ಬಲಭಾಗದಲ್ಲಿ ನಿಧಾನವಾಗಿ ಕೆಳಮುಖವಾಗಿ ಬಾಗುತ್ತ ಬನ್ನಿ. ಬಲಹಸ್ತ ಕೆಳಮುಖವಾಗಿ ಕೆಳಗೆ ಬರಬೇಕು. ಬಲಗೈನ ಬೆರಳುಗಳು ಬಲಮಂಡಿಯ ಹತ್ತಿರದಲ್ಲಿ ಕೆಳಗೆ ತೆಗೆದುಕೊಂಡು ಹೋಗಿ ನೆಲಕ್ಕೆ ತಾಗಿಸಬೇಕು. ಎಡಗೈಯನ್ನು ನೇರವಾಗಿ ಮೇಲಕ್ಕೆ ಎಳೆದಿರಬೇಕು. ಎಡ ಹಸ್ತ ಮತ್ತು ಮೊಣಕೈ ಎರಡೂ ಒಂದೇ ನೇರದಲ್ಲಿ ಎದೆಯ ಕಡೆಗೆ ನೇರವಾಗಿರಬೇಕು. ಬಲಗಾಲಿನ ಹಿಮ್ಮಡಿಯನ್ನು ಸ್ಪಲ್ಪ ಹಿಂದಕ್ಕೆ ತಳ್ಳಿ ಬಲಪಾದದ ಒಳ ಅಂಚನ್ನು ಚೆನ್ನಾಗಿ ನೆಲಕ್ಕೆ ಒತ್ತಿರಬೇಕು. ಸೊಂಟವನ್ನು ಸ್ಪಲ್ಪ ಮುಂದಕ್ಕೆ ತಳ್ಳಿರಬೇಕು. ಹೊಟ್ಟೆಯನ್ನು ಒಳಗೆ ಎಳದಿರಬೇಕು. ಎದೆಯನ್ನು ಮೇಲಕ್ಕೆ ಎತ್ತಿರಬೇಕು. ಬೆನ್ನಿನ ಭಾಗ ನೇರವಾಗಿರಬೇಕು. ನಂತರ ಉಸಿರನ್ನು ತೆಗೆದುಕೊಳ್ಳುತ್ತ ಇದೇ ಸ್ಥಿತಿಯಲ್ಲಿ ಮೇಲಕ್ಕೆ ಬರಬೇಕು. ಪಾದವನ್ನು ಮುಂದಕ್ಕೆ ತೆಗೆದುಕೊಳ್ಳಬೇಕು. ಈಗ ಸಮಸ್ಥಿತಿಗೆ ಬನ್ನಿ. ಇದೇ ಸ್ಥಿತಿಯಲ್ಲಿ ಮೇಲಕ್ಕೆ ಬನ್ನಿ. ಪಾದವನ್ನು ಮುಂದಕ್ಕೆ ತೆಗೆದುಕೊಳ್ಳುತ್ತಾ, ಸಮಸ್ಥಿತಿಗೆ ಬನ್ನಿ. ಇದೇ ರೀತಿಯಲ್ಲಿ ಮತ್ತೊಂದು ಕಡೆ ಮುಂದುವರೆಸುವುದು.
ಉಪಯೋಗ

ಉಪಯೋಗಗಳು:  -ಎರಡೂ ಕಾಲುಗಳು ಸದೃಢಗೊಳ್ಳುವವು.

-ಸೊಂಟದ ಭಾಗದ ಕೊಬ್ಬಿನಂಶ ಕರಗುವುದು.

-ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಆಸನ.

– ಲೀವರ್ ಗಾಲ್‍ಬ್ಲಾಡರ್ ಸ್ಟ್ಲೀನ್ ಚೈತನ್ಯಗೊಳ್ಳುವವು.

-ಕಣ್ಣಿನ ಸಮಸ್ಯೆಗೆ ಉತ್ತಮ ಆಸನ

Categories: ನಾಟಿ ನಂಟು

Leave A Reply

Your email address will not be published.