’ಆಧುನಿಕ ಗಾಂಧಿ ಪರಂಪರೆ’ ಕುರಿತು ಛಾಯಾ ಚಿತ್ರ ಸ್ಪರ್ಧೆ

ಶಿರಸಿ: ಭಾರತೀಯ ಅಂಚೆ ಇಲಾಖೆಯು 2019ರ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ’ಆಧುನಿಕ ಗಾಂಧಿ ಪರಂಪರೆ’ ಕುರಿತು ಛಾಯಾಚಿತ್ರ ಗ್ರಹಣ ಸ್ಪರ್ಧೆ ಆಯೋಜಿಸಿದೆ.
ಛಾಯಾಚಿತ್ರಗಳ ಹಾರ್ಡ್ ಕಾಪಿಯನ್ನು ಸಾಫ್ಟ್ ಕಾಫಿ (ಸಿ.ಡಿ) ಯೊಂದಿಗೆ ಇದೇ ಜೂ. 30 ರೊಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ತಲುಪುವಂತೆ ಎ ಡಿ ಜಿ, ರೂಮ್ ನಂ.108, ಡಾಕ್ ಭವನ್, ಸಂಸದ ಮಾರ್ಗ್, ಹೊಸ ದೆಹಲಿ-110001 ಗೆ ಕಳಿಸಲು ತಿಳಿಸಲಾಗಿದೆ.

ಪ್ರತೀ ವಿಭಾಗದಲ್ಲಿ ಮೊದಲ ಬಹುಮಾನ 50 ಸಾವಿರ ರೂ, ಎರಡನೇ ಬಹುಮಾನ 25 ಸಾವಿರ ರೂ, ಮೂರನೇ ಬಹುಮಾನ 10 ಸಾವಿರ ರೂ, ನಿಗದಿಪಡಿಸಲಾಗಿದ್ದು, ಸಮಾಧಾನಕರ ಬಹುಮಾನವಾಗಿ 5000. ರೂ ಗಳನ್ನು ನೀಡಲಾಗುವುದೆಂದು. ಫಲಿತಾಂಶ ಆ.15 ರಂದು ಪ್ರಕಟಿಸಲಾಗುತ್ತಿದ್ದು ಬಹುಮಾನಿತ ಫೋಟೋಗಳನ್ನು ಅಂಚೆ ಚೀಟಿಯ ಡಿಸೈನ್‌ಗಾಗಿ ಮತ್ತು ಅಂಚೆ ಚೀಟಿ ಸಂಗ್ರಹಣದಲ್ಲಿ ಬಳಸಿಕೊಳ್ಳಲಾಗುವುದೆಂದು ಹೇಳಿದೆ. ಹೆಚ್ಚಿನ ಮಾಹಿತಿಗೆ WWW.indiapost.gov.in ಮೂಲಕ ಪಡೆಯಬಹುದು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.