ವೃಕ್ಷಾಸನದಿಂದ ಏನೆಲ್ಲಾ ಲಾಭವಿದೆ ನೀವೇ ನೋಡಿ

ವೃಕ್ಷಾಸನ: ಮರದ ರೀತಿಯಲ್ಲಿ ಸ್ಥಿರವಾಗಿ ನಿಲ್ಲುವಂಥದ್ದು, ಈ ಆಸನ. ಈ ಆಸನದಲ್ಲಿ ಒಂಟಿ ಕಾಲಿನಲ್ಲಿ ನಿಲ್ಲುವುದರಿಂದ ಯಾವ ಕಾಲನ್ನು ನೆಲಕ್ಕೆ ಒತ್ತಿರುತ್ತೇವೆಯೋ ಅದನ್ನು ಚೆನ್ನಾಗಿ ನೆಲಕ್ಕೆ ಒತ್ತಬೇಕು.

ವೃಕ್ಷಾಸನ ಮಾಡುವ ವಿಧಾನ: ಮೊದಲು ಸಮಸ್ಥಿತಿಯಲ್ಲಿ ನಿಂತು, ಬಲಗಾಲನ್ನು ಮೇಲೆ ತೆಗೆದುಕೊಳ್ಳಿ. ಎಡ ತೊಡೆಯ ಮೂಲಕ್ಕೆ ಬಲ ಹಿಮ್ಮಡಿಯನ್ನು ತಾಗಿಸಿ. ಕಾಲು ಬೆರಳುಗಳು ಕೆಳಮುಖವಾಗಿರಬೇಕು. ಮಂಡಿ ಸೊಂಟದ ನೇರಕ್ಕೆ ಇರಬೇಕು. ಎಡ ತೊಡೆಯಿಂದ ಬಲ ಪಾದವನ್ನು, ಬಲ ಪಾದದಿಂದ ಎಡ ತೊಡೆಯನ್ನು ಒಂದಕ್ಕೊಂದು ಒತ್ತುತ್ತಿರಬೇಕು. ಈಗ ಎರಡೂ ಕೈಗಳನ್ನು ನಿಧಾನವಾಗಿ ಮೇಲಕ್ಕೆ ಭುಜದ ನೇರಕ್ಕೆ ಅಂಗೈಗಳನ್ನು ಮೇಲ್ಮುಖ ಮಾಡಿ ಉಸಿರನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳು ಮೇಲೆ ನಮಸ್ಕಾರ ಸ್ಥಿತಿಯಲ್ಲಿರಲಿ. ದೃಷ್ಟಿ ನೇರವಾಗಿರಲಿ. ಈ ಸ್ಥಿತಿಯಲ್ಲಿ ಉಸಿರಾಟ ಸಹಜವಾಗಿರಲಿ. ಹಾಗೆ ನಿಧಾನವಾಗಿ ಕೈಗಳನ್ನು ಕೆಳಗಡೆ ಇಳಿಸಿ. ಎರಡೂ ಕೈಗಳನ್ನು ಸೊಂಟದ ಮೇಲೆ ತಂದ ನಂತರ ಬಲಪಾದವನ್ನು ಕೆಳಗಿಳಿಸಿ. ಇದೇ ರೀತಿ ಎಡಗಾಲಿನಿಂದ ಆಸನವನ್ನು ಮುಂದುವರೆಸಿ.

ವೃಕ್ಷಾಸನದ ಉಪಯೋಗ: * ಬೆನ್ನು ಮೂಳೆಯನ್ನು ಬಲಪಡಿಸುತ್ತದೆ.
* ನರಗಳು ಬಲವಾಗುತ್ತವೆ.
* ಕಾಲಿನ ಮಂಡಿ ಹಾಗೂ ಸೊಂಟ ಬಲವಾಗುವುದು
* ಕಣ್ಣುಗಳ ದೃಷ್ಟಿಗೆ ತುಂಬಾ ಒಳ್ಳೆಯದು.
* ತಾಳ್ಮೆ ಹೆಚ್ಚಿಸುವುದು,ಏಕಾಗ್ರತೆ ಹೆಚ್ಚಿಸುವುದು.

ಈ ಭಂಗಿಯಲ್ಲಿ ನಿಲ್ಲುವುದರಿಂದ ನರಗಳ ಸಮತೋಲನ ಕಾಪಾಡಲು ತುಂಬಾ ಸಹಕಾರಿ. ದೃಷ್ಟಿಯನ್ನು ಒಂದು ಕಡೆ ನೆಟ್ಟು, ದೇಹವನ್ನು ಬ್ಯಾಲೆನ್ಸ್ ಮಾಡುವುದರಿಂದ ನರಗಳು ಬಲವಾಗುತ್ತವೆ, ಮಾನಸಿಕ ಒತ್ತಡ ಕಡಿಮೆಯಾಗುವುದೆಂದು ವಿಜ್ಞಾನ ಹೇಳಿದೆ.

Categories: ನಾಟಿ ನಂಟು

Leave A Reply

Your email address will not be published.