2019ನೇ ಸಾಲಿನ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಪರೀಕ್ಷಾ ಪ್ರವೇಶ ಪತ್ರಕ್ಕೆ ಆಹ್ವಾನ

ಕುಮಟಾ: ಅಖಿಲ ಭಾರತೀಯ ಗಾಂಧರ್ವ ಮಹಾಮಂಡಳದ ವತಿಯಿಂದ ಪ್ರತಿವರ್ಷ ಡಿಸೆಂಬರದಲ್ಲಿ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಪರೀಕ್ಷಾ ಕೇಂದ್ರದಲ್ಲಿ ಜರುಗುವ ಸಂಗೀತ, ತಬಲಾ, ಸ್ವರವಾದ್ಯ, ಭರತನಾಟ್ಯ ಪರೀಕ್ಷೆಗಳ ಪ್ರವೇಶಪತ್ರವನ್ನು 2019 ನೇ ಸಾಲಿಗಾಗಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಆಸಕ್ತ ಸಂಗೀತ ವಿದ್ಯಾಲಯದ ಶಿಕ್ಷಕರು ಪರೀಕ್ಷೆಗೆ ಕೂಡುವ ವಿದ್ಯಾರ್ಥಿಗಳ ಸಂಖ್ಯೆಯ ಮಾಹಿತಿಯನ್ನು ಜೂ.30 ರೊಳಗೆ ನೀಡಬೇಕೆಂದು ಕೇಂದ್ರ ವ್ಯವಸ್ಥಾಪಕ ಡಾ ಕೆ. ಗಣಪತಿ ಭಟ್ಟ ಸೂಚಿಸಿದ್ದಾರೆ. ಈವರ್ಷದಿಂದ ಮಧ್ಯಮಾ ಪ್ರಥಮಾದಿಂದ ವಿಶಾರದ ವರೆಗಿನ ವಿದ್ಯಾರ್ಥಿಗಳು ಆನ್‌ಲೈನ್ www.abgmvm.org ಮೂಲಕ ಆವೇದನ ಪತ್ರ ತುಂಬಬೇಕು. ಪ್ರಾವೇಶಿಕ ಪೂರ್ಣದಿಂದ ವಿಶಾರದ ವರೆಗಿನ ವಿದ್ಯಾರ್ಥಿಗಳಿಗಾಗಿ ನ.17 ರಂದು ರವಿವಾರ ದೇಶದಾದ್ಯಂತ ಲಿಖಿತ ಪರೀಕ್ಷೆ ಇರುತ್ತದೆ.

ಆವೇದನ ಪತ್ರ ಶುಲ್ಕ ಹಾಗು ಅತಿರಿಕ್ತ ಶುಲ್ಕ ಹೊರತುಪಡಿಸಿ ಪರೀಕ್ಷಾ ಶುಲ್ಕಗಳ ಮಾಹಿತಿ ಈರೀತಿ ಇದೆ. ಪ್ರಾರಂಭಿಕ 150 ರೂ, ಪ್ರಾವೇಶಿಕ ಪ್ರಥಮ 200 ರೂ, ಪ್ರಾವೇಶಿಕ ಪೂರ್ಣ 250 ರೂ, ಮಧ್ಯಮ ಪ್ರಥಮಾ 320 ರೂ, ಮಧ್ಯಮ ಪೂರ್ಣ 350 ರೂ, ವಿಶಾರದ 550 ರೂ ಇದ್ದು ನೇರವಾಗಿ ಮುಂದಿನ ಪರೀಕ್ಷೆಗೆ ಕೂಡುವ ಅಭ್ಯರ್ಥಿಗಳು ಗಾಂಧರ್ವ ಮಂಡಳಕ್ಕೆ ಪತ್ರಮುಖೇನ ಸಂಪರ್ಕಿಸಿ ಜುಲೈ 31 ರೊಳಗೆ ಅನುಮತಿ ಪಡೆಯಬೇಕು.

ವಿಳಾಸ: ರಜಿಸ್ಟ್ರಾರ್, ಅಖಿಲ ಭಾರತೀಯ ಗಾಂಧರ್ವ ಮಹಾಮಂಡಲ, ಗಾಂಧರ್ವ ನಿಕೇತನ, ಬ್ರಾಹ್ಮಣಪುರಿ ಮಿರಜ, ಮಹಾರಾಷ್ಟ್ರ-416410 ದೂ 0233-2222536. ಹೆಚ್ಚಿನ ಮಾಹಿತಿಗಾಗಿ 08386-264161, 9448232435 ಸಂಪರ್ಕಿಸಬಹುದು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.