ಹೆಸರಿಗೆ ಪ್ರಸಿದ್ಧ ಪ್ರವಾಸಿ ತಾಣ: ಪ್ರವಾಸೋದ್ಯಮದ ನಿರ್ಲಕ್ಷ್ಯದಿಂದ ಮಾರ್ಗ ಸೂಚಿಯೇ ಇಲ್ಲ

ಗೋಕರ್ಣ: ಪುರಾಣ ಪ್ರಸಿದ್ದ ಕ್ಷೇತ್ರ, ಜಗತ್ ಪ್ರಸಿದ್ದ ಪ್ರವಾಸಿ ತಾಣ ಗೋಕರ್ಣ. ಇಲ್ಲಿಗೆ ಬರಬೇಕಾದರೆ ಗೋವಾ ಕಾರವಾರದಿಂದ ಬೇಕಾದರೆ ಬನ್ನಿ, ಮಂಗಳೂರು ಕುಮಟಾ, ಸಿರ್ಸಿ ಹುಬ್ಬಳ್ಳಿ ಯಾವುದೇ ಊರಿನಿಂದ ಪ್ರವಾಸಿಗರು ಬಂದರು ರಾಷ್ಟ್ರೀಯ ಹೆದ್ದಾರಿಯಿಂದ ಮಾದನಗೇರಿಯಲ್ಲಿ ತಿರುಗಿ 10 ಕಿ.ಮೀ. ಸಾಗಿ ಬರಲೇ ಬೇಕು. ಆದರೆ ಪ್ರವಾಸೋದ್ಯಮ ಎಂಬ ಬಿರುದು ನೀಡಿದ ಇಲಾಖೆ ಪ್ರವಾಸಿಗರಿಗೆ ಕನಿಷ್ಠ ನಾಮಫಲಕವನ್ನು ಹಾಕದಿರುವುದು ಬರುವಂತವರಿಗೆ ಪರದಾಡುವ ಪರಿಸ್ಥಿತಿ ನಿರ್ಮಿಸಿದೆ.

ಕಾರವಾರದ ಕಡೆಯಿಂದ ಬಂದರೆ ರಾಷ್ಟ್ರೀಯ ಹೆದ್ದಾರಿಯಿಂದ ಮಾದನಗೇರಿಯಲ್ಲಿ ಬಲಗಡೆ ತಿರುಗಿ ಸಾಗಬೇಕು, ಇನ್ನೂ ಕುಮಟಾ ಕಡೆಯಿಂದ ಬಂದರೆ ಎಡಗಡೆಯಿಂದ ಬಳಲೆ ಸಮೀಪ ತಿರುಗಿ ಸಾಗಬೇಕು. ಈ ಎರಡು ಮಾರ್ಗಕ್ಕೆ ಸಾಗಲು ಒಂದೇ ಒಂದು ನಾಮಫಲಕವು ಇಲ್ಲ. ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರು ಹೋಗಲು ದಾರಿ ತಿಳಿಯದೆ ಅಂಕೋಲಾದಿಂದ ವಾಪಸ್ ಬಂದಿದ್ದು, ಹಿರೇಗುತ್ತಿ, ಮಿರ್ಜಾನವರೆಗೆ ಸಾಗಿ ವಾಪಸ್ ಬಂದು ಗೋಕರ್ಣಕ್ಕೆ ಬಂದಿದ್ದು ಇದೆ. ಇಷ್ಟಾದರೂ ಪ್ರವಾಸೋದ್ಯ ಇಲಾಖೆಯಾಗಲಿ ಲೋಕೋಪಯೋಗಿ ಇಲಾಖೆಯಾಗಲಿ ನಾಫಲಕ ಹಾಕದೆ ನಿರ್ಲಕ್ಷವಹಿಸಿದ್ದಕ್ಕೆ ಪ್ರವಾಸಿಗರು ಹಿಡಿ ಶಾಪ ಹಾಕುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ತೆಗೆದು ಕೊಳ್ಳಬೇಕಿದೆ.

ಬಸ್ ಕಾಯುವವರ ಗೋಳು: ಕಾರವಾರಕ್ಕೆ ತೆರಳುವ ಬಸ್ ಅಥವಾ ಮಂಗಳೂರು ಕಡೆ ತೆರಳುವ ಯಾವುದೆ ಬಸ್ ನಲ್ಲಿ ಬಂದರೆ ಈ ಹೆದ್ದಾರಿಯ ಮಾದನಗೇರಿ ಕ್ರಾಸ್ ನಲ್ಲಿ ಇಳಿಯಲೇಬೇಕು. ಇಲ್ಲಿಂದ ಗೋಕರ್ಣಕ್ಕೆ ಕುಮಟಾದಿಂದ ಅಥವಾ ಅಂಕೋಲಾದಿಂದ ಬರುವ ಬಸ್ ಹತ್ತಿ ಗೋಕರ್ಣಕ್ಕೆ ತೆರಳಬೇಕು.ಆದರೆ ಇಲ್ಲಿ ಇಳಿಸಿ ಹೋದನಂತರ ಒಂದೆಡೆ ಹೆದ್ದಾರಿ ಅಗಲಿಕರಣಕ್ಕೆ ಬಗೆದ ರಸ್ತೆ ಇನ್ನೂಂದೆಡೆ ಶರವೇಗದಲ್ಲಿ ಬರುವ ವಾಹನ ಇದನ್ನೆಲ್ಲಾ ದಾಟಿ ಇನ್ನೂಂದು ಬಸ್ ಹತ್ತಲು ಹರಸಾಹಸ ಪಡಬೇಕು. ಹೊರ ಊರಿನಿಂದ ಬರವುವವರ ಪಾಡು ಹೇಳ ತೀರದು. ಬಿಸಿಲು ಮಳೆ ಎನ್ನದೆ ಪ್ರತಿ ನಿತ್ಯ ಸ್ಥಳೀಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹ ಇದೇ ರೀತಿ ಪರದಾಡುತ್ತಾ ನಿತ್ಯ ಸಂಚಾರ ಮಾಡುತ್ತಿದ್ದು, ಹಲವು ವರ್ಷ ಕಳೆದಿದೆ ಆದರೂ ಪ್ರಯಾಣಿಕರಿಗೆ ಕನಿಷ್ಟ ಸೌಲಭ್ಯ ವನ್ನು ಕಲ್ಪಿಸದಿರುವುದು. ಜನಪ್ರತಿನಿಧಿಗಳು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಕಾರ್ಯವೈಕರಿಗೆ ಹಿಡಿದ ಕೈಗನ್ನಡಿಯಾಗಿದೆ.

‘ನಾವು ಬೆಂಗಳೂರಿನಿಂದ ಕುಟುಂಬ ಸಮೇತರಾಗಿ ಇದೇ ಮೊದಲನೇ ಬಾರಿ ಗೋಕರ್ಣಕ್ಕೆ ಪ್ರವಾಸಕ್ಕೆ ಸ್ವಂತ ವಾಹನದಲ್ಲಿ ಬಂದ್ದಿದ್ದೆ, ನನಗೆ ಹೆದ್ದಾರಿಯಲ್ಲಿ ಎಲ್ಲಿ ತಿರುಗಬೇಕೆಂದು ತಿಳಿಯದೆ ಅಂಕೋಲಾದ ಹತ್ತಿರ ಯಾವುದೊ ಊರಿನವರೆಗೆ ಸಾಗಿದ್ದು, ಪುನಃ ವಾಪಸ್ ಬಂದು ಗೋಕರ್ಣ ತಲುಪಿದ್ದೇನೆ ದಯವಿಟ್ಟು ಮಾರ್ಗಸೂಚಿ ನಾಮಫಲ ಹಾಕಿ ಪ್ರವಾಸಿಗರಿಗೆ ಅನೂಕುಲ ಕಲ್ಪಿಸಿ’  – ಮುನಿರಾಜು ಪ್ರವಾಸಿಗ , ಬೆಂಗಳೂರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.