ರಕ್ತದಾನದಿಂದ ಜೀವದಾನ: ಡಾ. ಶಿವಾನಂದ ವಿ. ನಾಯ್ಕ

ಕಾರವಾರ: ರಕ್ತದಾನ ಮಾಡುವ ಕರ್ತವ್ಯದಿಂದ ಜೀವದಾನ ಸಾಧ್ಯವಿದ್ದು ಯುವ ಸಮುದಾಯ ಸ್ವಯಂ ಪ್ರೇರಿತರಾಗಿ ರಕ್ತದಾನಿಗಳಾಗಬೇಕೆಂದು ಶಿವಾಜಿ ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ. ಶಿವಾನಂದ ವಿ. ನಾಯ್ಕ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಕಾರವಾರದ ಬಾಡ ಶಿವಾಜಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಜೀವರಕ್ಷಣೆಗೆ ಅತ್ಯಂತ ಅಮೂಲ್ಯವಾಗಿ ಬೇಕಿರುವ ರಕ್ತವನ್ನು ಯಾವ ಕಾರ್ಖಾನೆಯಲ್ಲೂ ತಯಾರು ಮಾಡಲು ಸಾಧ್ಯವಿಲ್ಲ. ಅಂತಹ ಜೀವ ರಕ್ಷಕ ರಕ್ತವನ್ನು ದಾನ ಮಾಡುವ ಮೂಲಕ ಅನೇಕ ಜೀವಗಳ ರಕ್ಷಣೆಗೆ ಯುವ ಸಮುದಾಯ ಮುಂದಾಗಬೇಕು. ರಕ್ತದಾನದ ಬಗ್ಗೆ ಈಗಾಗಲೇ ಸಕಷ್ಟು ಜಾಗೃತಿ ಜನರಲ್ಲಿ ಆಗಿದ್ದರೂ ಸ್ವಯಂ ಪ್ರೇರತರಾಗಿ ಅಂತಹ ಪವಿತ್ರ ಕೆಲಸಕ್ಕೆ ಮುಂದಾಗಬೇಕು. ನಮ್ಮ ಅಕ್ಕ ಪಕ್ಕದ ಪರಿಸರದಲ್ಲಿರುವವರನ್ನು ಇಂತಹ ಒಳ್ಳೆಯ ಉದ್ದೇಶಕ್ಕೆ ಪ್ರೇರೇಪಿಸಬೇಕು ಎಂದರು.

ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಮಾತನಾಡಿ, ರಕ್ತದಾನ ಕೇವಲ ದಾನವಾಗಿರದೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಒಂದು ಯೂನಿಟ್ ರಕ್ತದಿಂದ ಬರುವ ಮೂರು ಜೀವರಕ್ಷಕ ಕಣಗಳ ಕನಿಷ್ಠ ಮೂರು ಜನರ ಜೀವ ರಕ್ಷಿಸುವುದಾದರೆ ಅದಕ್ಕಿಂತ ಪವಿತ್ರವಾದ ಕೆಲಸ ಮತ್ತೊಂದಿಲ್ಲ. ಇಂತಹ ಸಾರ್ಥಕ ಕೆಲಸಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕುಎಂದರು.

ಜನ ಶಕ್ತಿ ವೇದಿಕೆಯ ಅಧ್ಯಕ್ಷ ಮಾಧÀವ ನಾಯಕ ಮಾತನಾಡಿ, ರಕ್ತದಾನ ಎನ್ನುವುದು ಸಮಾಜದಲ್ಲಿನ ತಾರತಮ್ಯವನ್ನು ಮೆಟ್ಟಿನಿಂತ ಮಹತ್ವದ ಕಾರ್ಯ. ಯಾವುದೇ ಧರ್ಮ, ಜಾತಿ, ಬಡವ, ಶ್ರೀಮಂತ, ಮೇಲು ಕೀಳು ಎಂಬ ಬೇಧವಿಲ್ಲದ ಜೀವ ರಕ್ಷಿಸುವ ರಕ್ತಕ್ಕೆ ಬೇಧವಿಲ್ಲ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ. ಎನ್. ಅಶೋಕ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ವಿ. ಎಂ. ಹೆಗಡೆ, ಕಾರ್ಯದರ್ಶಿ ಜಗದೀಶ್, ನಗರಸಭೆ ಸದಸ್ಯ, ಪಾಂಡುರಂಗ ರೇವಣಕರ್, ಸಮಾಜ ಸೇವಕರಾದ ಖೈರುನ್ನೀಸಾ ಶೇಖ್, ನಜೀರ್ ಅಹಮ್ಮದ ಶೇಖ್, ವೈದ್ಯಾಧಿಕಾರಿ ಡಾ. ವೆಂಕಟೇಶ್, ಡಾ. ಸೂರಜ್ ನಾಯ್ಕ ಮತ್ತಿರರು ಇದ್ದರು. ಡಾ. ಮಹಾಬಲೇಶ್ವರ ಹೆಗಡೆ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಅಶ್ವಿನಿ ಹುಲಸ್ವಾರ್ ನಿರೂಪಿಸಿದರು. ಮಹಂತೇಶ್ ವಂದಿಸಿದರು. ಕಾರ್ಯಕ್ರಮಕ್ಕೆ ಮುನ್ನ ನಂದನಗದ್ದ ವ್ಯಾಪ್ತಿಯ ಪ್ರದೇಶದಲ್ಲಿ ರಕ್ತದಾನ ಕುರಿತು ಜಾಗೃತಿ ಜಾಥಾ ನಡೆಯಿತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.