ಭೀಮಣ್ಣ ನಾಯ್ಕ ನೇತೃತ್ವದಲ್ಲಿ ನಗರ ವ್ಯಾಪ್ತಿ ಕಟ್ಟಡ ನಿರ್ಮಾಣ ಸಮಸ್ಯೆ ಕುರಿತು ಚರ್ಚೆ


ಶಿರಸಿ: ಇಲ್ಲಿನ ನಗರ ವ್ಯಾಪ್ತಿಯ ನಿವೇಶನ ಮತ್ತು ಕಟ್ಟಡ ನಿರ್ಮಾಣದಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಜೂ.14 ರಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್ ರ ನೇತೃತ್ವದಲ್ಲಿ ಪಕ್ಷದ ಪ್ರಮುಖರೊಂದಿಗೆ ಶಿರಸಿಯ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು.

ಮರಾಠಿಕೊಪ್ಪ, ಇಂದಿರಾನಗರ, ಬಸವೇಶ್ವರ ಕಾಲನಿ ಮತ್ತು ಚಿಪಗಿ ನಾರಾಯಣ ಗುರು ನಗರಗಳ ಸಮಸ್ಯೆ, ವಾಸ್ತವಿಕ ಸ್ಥಿತಿ, ಸಮಸ್ಯೆ ನಿವಾರಣೆಗೆ ಪರಿಹಾರದ ಮಾರ್ಗ ಕಂಡುಕೊಳ್ಳಲು ಇಲಾಖಾ ಮಟ್ಟದಲ್ಲಿ ಹಾಗೂ ಸರಕಾರದ ಮಟ್ಟದಲ್ಲಿ ಆಗಬೇಕಾದ ಕಾರ್ಯಗಳ ಕುರಿತು ಚರ್ಚಿಸಿ ಮಾರ್ಗೋಪಾಯಗಳ ಬಗ್ಗೆ ತಹಶೀಲ್ದಾರ್, ನಗರಸಭೆ ಕಮಿಷನರ್, ನಗರ ಯೋಜನಾ ಪ್ರಾಧಿಕಾರದ ಅಭಿಯಂತರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಎಸ್ ಕೆ ಭಾಗವತ್, ರಮೇಶ್ ದುಭಾಶಿ, ಶ್ರೀಕಾಂತ್ ತಾರಿಬಾಗಿಲ ಮುಂತಾದವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.