ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ಹಲ್ಲೆ: ಸೂಕ್ತ ರಕ್ಷಣೆಗೆ ಶಿರಸಿ ವೈದ್ಯಕೀಯ ಸಂಘದಿಂದ ಪ್ರತಿಭಟನೆ

ಶಿರಸಿ: ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರೊಬ್ಬರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ, ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಶಿರಸಿ ಶಾಖೆಯ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ, ಉಪವಿಭಾಧಿಕಾರಿಗೆ ಮನವಿ ಸಲ್ಲಿಸಿದರು.

ಕಲ್ಕತ್ತದ ಎನ್.ಆರ್. ಎಸ್ ‌. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರಯ ವೈದ್ಯ ಡಾ.ಪರಿಬಾಹ ಮುಖರ್ಜಿ ಮೇಲಿನ ಮಾರಣಾಂತಿಕ ಹಲ್ಲೆ ಅಮಾನವೀಯ ಮತ್ತು ಖಂಡನೀಯ. 85 ವರ್ಷ ಮುದುಕನ ಸಾವಿನಿಂದ ವೈದ್ಯರ ಮೇಲಿನ ಹಲ್ಲೆ ಸರಿಯಲ್ಲ ಎಂದು ಖಂಡಿಸಿ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ 30 ಕ್ಕೂ ಅಧಿಕ ವೈದ್ಯರು ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಕಲ್ಲತ್ತದಲ್ಲಿ ನಡೆದಿರುವಂತೆ ಮುಂದೆ ಇನ್ನೆಲ್ಲೋ ನಡೆಯುವ ಸಾಧ್ಯತೆ ಇರುತ್ತದೆ. ಇದಕ್ಕೆ ನಾಂದಿ ಹಾಡಲು ಸರ್ಕಾರ ಸಜ್ಜಾಗಬೇಕು. ಇಲ್ಲದೇ ಹೋದಲ್ಲಿ ಇಡಿ ವೈದ್ಯಕೀಯ ಸಮೂಹವೇ ವೃತ್ತಿಗೆ ವಿದಾಯ ಹೇಳಬಹುದು. ಹಾಗಾಗುವ ಮೊದಲು ಹಲ್ಲೆ ಮಾಡುವವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭಾರತೀಯ ವೈದ್ಯಕೀಯ ಸಂಘ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ಶಿರಸಿ ಶಾಖೆ ಬದ್ದವಾಗಿದೆ. ಹಲ್ಲೆ ಮಾಡಿದ ಅಪರಾಧಿಗಳನ್ನು ಶೀಘ್ರ ಬಂಧಿಸಿ ಶಿಕ್ಷಿಸಬೇಕು ಹಾಗೂ ಕೇಂದ್ರ ಸರ್ಕಾರ ನೂತನ ಕಾಯ್ದೆಯನ್ನು ಅನುಷ್ಠಾನಕ್ಕೆ ತರಬೇಕು. ವೈದ್ಯರ ಮೇಲೆ ಹಲ್ಲೆ ಮಾಡುವವರಿಗೆ 7 ವರ್ಷ ಶಿಕ್ಷೆ ನೀಡುವಂತೆ ಆಗಬೇಕು. ಆಗ ಜಾಮೀನು ಸಿಗದಂತೆ ಆಗುತ್ತದೆ ಎಂಬ ಬೇಡಿಕೆಗಳನ್ನು ಇರಿಸಿದ ವೈದ್ಯರು, ಇದೇ ರೀತಿ ಹಲ್ಲೆ ಮುಂದುವರೆದಲ್ಲಿ ಆರೋಗ್ಯ ರಕ್ಷಣೆಯನ್ನು ದೇವರೂ ಮಾಡಲಾರ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಶಿರಸಿ ಶಾಖೆಯ ಕಾರ್ಯದರ್ಶಿ ಡಾ.ತನುಶ್ರೀ, ವೈದ್ಯರಾದ ಡಾ.ದಿನೇಶ ಹೆಗಡೆ, ಡಾ.ಮಹೇಶ ಹೆಗಡೆ, ಡಾ.ಮಮತಾ ಹೆಗಡೆ, ಡಾ.ಅಶ್ವಿನಿ, ಡಾ.ರವಿಕಿರಣ ಪಟವರ್ಧನ ಮುಂತಾದವರು ಪಾಲ್ಗೊಂಡಿದ್ದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.