ಜೂ.15ಕ್ಕೆ ಶಿರಸಿಯಲ್ಲಿ ಗ್ರಾಹಕರ ವಿದ್ಯುತ್ ಅದಾಲತ್

ಶಿರಸಿ: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರ ಅದಾಲತ್ ಹಾಗೂ ಗ್ರಾಹಕರ ಸಂವಾದ ಸಭೆಯನ್ನು ಪ್ರತಿ ತಿಂಗಳ 3ನೇ ಶನಿವಾರದಂದು ಹಮ್ಮಿಕೊಳ್ಳಲು ನಿಗಮ ಕಛೇರಿಯಿಂದ ಆದೇಶಿಸಿದ್ದು, ಅದರಂತೆ ಜೂ. 15 ಶನಿವಾರದಂದು ಗ್ರಾಹಕರ ವಿದ್ಯುತ್ ಅದಾಲತ್‍ನ್ನು ಮುಂಜಾನೆ 10.30 ರಿಂದ 1.30ರವರೆಗೆ ಮತ್ತು ಗ್ರಾಹಕರ ಸಂವಾದ ಸಭೆಯನ್ನು ಮಧ್ಯಾಹ್ನ 3 ರಿಂದ 5.30 ರವರೆಗೆ ಶಿರಸಿ ವಿಭಾಗದ ಆವರಣದಲ್ಲಿರುವ ಸಭಾ ಭವನದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.

ಕಾರಣ ಸಾರ್ವಜನಿಕರು ವಿದ್ಯುತ್ ಅದಾಲತ್‍ನಲ್ಲಿ ಹೊಸಸಂಪರ್ಕ, ಹೆಸರು ಬದಲಾವಣೆ, ಜಕಾತಿ ಬದಲಾವಣೆ, ಹೊರೆ ಕಡಿಮೆಗೊಳಿಸುವಿಕೆ, ಬಾಕಿ ಇರುವ ಅರ್ಜಿಗಳ ಹಾಗೂ ವಿದ್ಯುತ್ ಬಿಲ್ ಕುರಿತಾದ ದೂರುಗಳ ಇತ್ಯರ್ಥ ಮತ್ತು ಗ್ರಾಹಕರ ಸಂವಾದ ಸಭೆಯಲ್ಲಿ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಭೆಗೆ ಹಾಜರಾಗಲು ತಿಳಿಸಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.