ಶಿರಸಿಯಲ್ಲಿ ಜೂ.15ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: ಇಲ್ಲಿನ 220/11ಕೆ.ವಿ ವಿದ್ಯುತ್ ಉಪಕೇಂದ್ರ ಮತ್ತು 110/11ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ, ಹಾಗೂ ವಿವಿಧ ಮಾರ್ಗಗಳ ಲಿಂಕ್ ಲೈನ್ ಹಾಗೂ ತಂತಿ ಬದಲಾವಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವ ಕಾರಣ ಜೂ.15 ಶನಿವಾರ ದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 5.30 ಘಂಟೆ ವರೆಗೆ ಶಿರಸಿ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜು ಇರುವುದಿಲ್ಲ. ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಹೆಸ್ಕಾಂ, ಶಿರಸಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.