ಭಾರೀ ತುರುಸಿನಲ್ಲಿ ನಡೆದ ಶಿರಸಿ ಸರಕಾರಿ ನೌಕರರ ಚುನಾವಣೆ


ಶಿರಸಿ: ತಾಲ್ಲೂಕು ನೌಕರರ ಸಂಘದ ಚುನಾವಣೆ ಅತಿ ತುರುಸಿನಿಂದ ಬುಧವಾರ ಬೆಳಿಗ್ಗೆ ಹತ್ತು ಗಂಟೆಯಿಂದ ಪ್ರಾರಂಭಗೊಂಡ ಚುನಾವಣೆ ಸಂಜೆ ಐದು ಗಂಟೆಯವರೆಗೆ ನಡೆಯಿತು. ಸಂಜೆ ಸುಮಾರು ಆರು ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿತು .

ಎಂಟು ಸ್ಥಾನಕ್ಕೆ ಒಟ್ಟು ಹದಿನಾರು ಸ್ಪರ್ಧಿಗಳು ಸ್ಪರ್ಧಿಸಿದ್ದು ಚುನಾವಣೆ ಬಹಳ ತುರುಸಿನಿಂದ ನಡೆಯಿತು. ಪ್ರೌಢಶಾಲೆ ಕಂದಾಯ ಇಲಾಖೆ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಒಟ್ಟು ಎಂಟು ಸ್ಥಾನಕ್ಕಾಗಿ ಚುನಾವಣೆ ನಡೆದಿದ್ದು ಪ್ರೌಢಶಾಲಾ ವಿಭಾಗದಲ್ಲಿ ಕಿರಣ್ ನಾಯ್ಕ್ ತೊಂಬತ್ತೊಂದು ಮತಗಳನ್ನು ಪಡೆಯುವ ಮೂಲಕ ಭರ್ಜರಿ ವಿಜಯ ಸಾಧಿಸಿದರು. ಅದೇ ರೀತಿ ಕಂದಾಯ ಇಲಾಖೆಯ ಶ್ರೀಕೃಷ್ಣ ಕಾಮಕರ್ ಹಾಗೂ ರಮೇಶ್ ಹೆಗ್ಡೆ ವಿಜಯಶಾಲಿಯಾದರು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುರೇಶ ಪಟಗಾರ, ಅರುಣ್ ನಾಯ್ಕ್, ಹರೀಶ್ ನಾಯಕ್, ವಸಂತ್ ನಾಯ್ಕ ಹಾಗೂ ನರಸಿಂಹ ಭಾಗ್ವತ್ ಇವರು ವಿಜಯಶಾಲಿಯಾದರು ಚುನಾವಣಾ ಅಧಿಕಾರಿಯಾಗಿ ನಿವೃತ್ತ ಉಪತಹಶೀಲ್ದಾರ ವಿಜಿ ನಾಯ್ಕ ಕಾರ್ಯ ನಿರ್ವಹಿಸಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.