ಗೋಕರ್ಣ ಗ್ರಾ.ಪಂ ಸದಸ್ಯರಿಗೆ ಡೆಂಗ್ಯೂ- ಮಲೇರಿಯಾ ತರಬೇತಿ ಶಿಬಿರ


ಗೋಕರ್ಣ: ಮಲೇರಿಯಾ ಮತ್ತು ಡೆಂಗ್ಯೂ ನಿವಾರಣೆ ಮಾಸಾಚರಣೆಯ ಅಂಗವಾಗಿ ಮಲೇರಿಯಾ, ಡೆಂಗ್ಯೂ ರೋಗ ಬರದಂತೆ ಮುಂಜಾಗ್ರತೆ ಕ್ರಮ, ರೋಗ ಹರಡಿದರೆ ತಕ್ಷಣ ತೆಗೆದುಕೊಳ್ಳ ಬೇಕಾದ ಕ್ರಮಗಳ ಕುರಿತು ಗ್ರಾಮ ಪಂಚಾಯತ ಸದಸ್ಯರಿಗೆ ಆರೋಗ್ಯ ಇಲಾಖೆಯಿಂದ ತರಬೇತಿ ಕಾರ್ಯಾಗಾರ ಇಲ್ಲಿನ ಗ್ರಾಮ ಪಂಚಾಯತ ಸಭಾಭವನದಲ್ಲಿ ನಡೆಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಜಗದೀಶ ನಾಯ್ಕ ಈ ಕುರಿತು ಮಾಹಿತಿ ನೀಡಿದರು. ‘ಸೊನ್ನೆ ಮಲೇರಿಯಾ ನನ್ನಿಂದ ಸಾಧ್ಯ’ ಎಂಬ ಈ ವರ್ಷದ ಘೋಷ ವಾಕ್ಯವಾಗಿ ಸ್ವೀಕರಿಸಲಾಯಿತು. ಗ್ರಾಮ ಪಂಚಾಯತ ಅಧ್ಯಕ್ಷೆ ಮಹಾಲಕ್ಷ್ಮೀ ಭಡ್ತಿ, ಉಪಾಧ್ಯಕ್ಷ ಶೇಖರ ನಾಯ್ಕ, ಮತ್ತು ಗ್ರಾಂ. ಪಂ. ಸದಸ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.