ಶಿರಸಿ: ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಹೆಂಡದ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಯನ್ನು ಕುಳವೆ ಗ್ರಾಮ ಪಂಚಾಯತದ ಸದಸ್ಯರು, ಸಾರ್ವಜನಿಕರು ಸೇರಿ ಸ್ವಚ್ಚಗೊಳಿಸಿ ಸ್ವಚ್ಛಮೇವ ಜಯತೇ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದಾರೆ.
ಕುಳವೆ ಗ್ರಾಮಪಂಚಾಯತ್ ವ್ಯಾಪ್ತಿಯ ಪಡಂಬೈಲ್ ರಸ್ತೆಯಲ್ಲಿ ನಗರ ವ್ಯಾಪ್ತಿಯ ತ್ಯಾಜ್ಯಗಳನ್ನೆಲ್ಲ ಅನಾಗರಿಕರು ತಂದು ಸುರಿಯುತ್ತಿದ್ದು, ಈ ವಿಷಯದ ಬಗ್ಗೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಊರ ನಾಗರಿಕರೊಂದಿಗೆ ಸೇರಿ ಒಂದು ದಿನ ಸ್ವಚ್ಛತಾ ಅಭಿಯಾನವನ್ನು ನಡೆಸಿದ್ದಾರೆ.
ಸಾರ್ವಜನಿಕರು ಹಾಗೂ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳೆಲ್ಲ ಸೇರಿ ಕಸ ಒಗ್ಗೂಡಿಸಿ ನಗಸಭೆ ಕಸದ ವಾಹನದ ಸಹಾಯದಿಂದ ವಿಲೇವಾರಿ ಮಾಡಿದ್ದಾರೆ. ಅಧ್ಯಕ್ಷೆ ಚಂದ್ರಮತಿ ನಾಯ್ಕ್, ಉಪಾಧ್ಯಕ್ಷ ಭರತ್ ಹೆಗಡೆ, ಸದಸ್ಯರಾದ ಗಂಗಾಧರ್ ನಾಯ್ಕ್,ಕವಿತಾ ಭಟ್,ಮಂಜುನಾಥ ನಾಯ್ಕ್ ಹಾಗೂ ಅಭಿವೃದ್ಧಿ ಅಧಿಕಾರಿ ಸರೋಜಾ ನಾಯಕ್ ಮತ್ತು ಊರ ಹಿರಿಯರಾದ ಕಾಳಿಂಗ ಮರಾಠೇ, ದತ್ತಾತ್ರೇಯ ಮರಾಠೇ, ಗಿರೀಶ್ ಭಟ್, ಅಶೋಕ್ ನಾಯ್ಕ್ ಇತರರು ಭಾಗವಹಿಸಿದ್ದರು.