ಗೋಕರ್ಣ: ಪ್ರವಾಸಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಟ್ಯಾಟೂ ( ಹಚ್ಚೆ)ಅಂಗಡಿಗಳು ಹೆಚ್ಚುತ್ತಿದ್ದು, ಯುವ ಸಮೂಹ ಇದಕ್ಕೆ ಮುಗಿ ಬೀಳುತ್ತಿದ್ದು, ಇಲ್ಲಿನ ರಥಬೀದಿ, ಸಮುದ್ರ ರಸ್ತೆಗಳಲ್ಲಿ ಅಂಗಡಿಗಳು ತೆಲೆ ಎತ್ತಿವೆ. ಈ ಸಂಬಂಧ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ಅಂಗಡಿಯರ ಸಭೆ ಕರೆಯಲಾಯಿತು.
ಟ್ಯಾಟೂ ಹಾಕುವದರಿಂದ ಬರುವ ರೋಗಗಳು, ಸ್ವಚ್ಛತೆಯ ಕುರಿತು ಮಾಹಿತಿಯನ್ನು ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ನೀಡಿದರು. ತ್ಯಾಜ್ಯ ವಿಲೇವಾರಿ, ಪಂಚಾಯತ ಪರವಾನಿಗೆ ಪತ್ರ, ಸಹಾಯಕರು, ಮಾಲಕರ ಆರೋಗ್ಯ ಸಂಬಂಧಿಸಿದ ವಿವರ ಬಗ್ಗೆ, ಟ್ಯಾಟೂ ಹಾಕಿದವರ ಸಂಪೂರ್ಣ ವಿಳಾಸದ ದಾಖಲೆ ನಿರ್ವಹಿಸುವುದು, ಹೆಪಟೈಟಿಸ್ ಚುಚ್ಚುಮದ್ದು ಹಾಕಿಸಿಕೊಳ್ಳುವುದು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಮಾಹಿತಿ ನೀಡಲಾಯಿತು.
ಒಟ್ಟು 11 ಅಂಗಡಿಗಳ ಮಾಲಕರು ಪಾಲ್ಗೊಂಡಿದ್ದರು. ಈಗಾಗೆಲೆ ಜಾತ್ರೆಗಳಲ್ಲಿ ಹೆಚ್ಚೆಹಾಕುವುದನ್ನು ನಿರ್ಭಂದಿಸಿ ಕ್ರಮ ತೆಗದುಕೊಳ್ಳಲು ಸರ್ಕಾರ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಆದರೆ ಇಲ್ಲಿನ ಅಂಗಡಿಗಳ ಬಗ್ಗೆ ಜಿಲ್ಲಾಡಳಿತ ಯಾವ ಕ್ರಮ ತೆಗದುಕೊಳ್ಳುತ್ತದೆ ಎಂಬುದನ್ನು ಕಾದು ನೋಡ ಬೇಕಿದೆ.