ಬೇಲೆಕಾನಿಗೆ ಸಮರ್ಪಕ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರಿಂದ ಶಾಸಕರಿಗೆ ಮನವಿ

ಗೋಕರ್ಣ: ಇಲ್ಲಿನ ಬೇಲೆಕಾನಿನ ಕೊನೆಯಲ್ಲಿ (ಅಶೋಕೆ)ವಾಸವಿರುವ ಹರಿಜನಕೇರಿಗೆ ನಿತ್ಯ ಸಂಚರಿಸಲು ರಸ್ತೆ ನಿರ್ಮಿಸಿಕೊಡವಂತೆ ಸ್ಥಳೀಯ ನಿವಾಸಿಗಳು ಶಾಸಕ ದಿನಕರ ಶೆಟ್ಟಿಯವರಿಗೆ ಕುಮಟಾಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ.

ನೂರು ಮನೆಗಳಿರುವ ಈ ಜಾಗದಲ್ಲಿ ಮುಕ್ರಿ ಸಮಾಜದವರು ವಾಸಿಸುತ್ತಿದ್ದು, ನಿತ್ಯ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದು, ಬೇಲೆಕಾನ್ ನಿಂದ ತದಡಿಯವರಗೆ ರಸ್ತೆ ಇದೆ ಆದರೆ ಬೇಲೆಕಾನಗೆ ಬರಬೇಕಾದರೆ ಎರಡು ಖಾಸಗಿ ಜಾಗಗಳನ್ನು ದಾಟಿ ಅಂದಾಜು 200ಮೀಕ್ಕಿಂತ ಹೆಚ್ಚು ನಡೆದು ಬರ ಬೇಕು. ವೃದ್ಧರು ಆನಾರೋಗ್ಯ ಪೀಡಿತರನ್ನು ಹೊತ್ತು ಸಾಗಬೇಕು, ಖಾಸಗಿ ಜಾಗದವರ ಗೇಟ್ ದಾಟಿ ಹೋಗಲು ಹರಸಾಹಸ ಪಡಬೇಕಾಗುತ್ತದೆ, ಶಾಲಾ ಮಕ್ಕಳಿಗೂ ಇದೇ ಸಮಸ್ಯೆ ಇದೆ ಎಂದು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಈ ಮೊದಲು ತದಡಿ ಬೇಲೆಕಾನ್ ರಸ್ತೆಯನ್ನು ತಮ್ಮ ಅನುದಾನದಡಿಯಲ್ಲೆ ನಿರ್ಮಿಸಿಕೊಟ್ಟಿದ್ದು, ಅದರಂತೆ ನಿಮಗೂ ರಸ್ತೆ ನಿರ್ಮಿಸಿಕೊಡುವುದಾಗಿ ತಿಳಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.