ತಾ.ಪಂ ಅಭಿವೃದ್ಧಿಗೆ 86.18 ಲಕ್ಷ ರೂ.ಗಳ ಆಯವ್ಯಯ ಮಂಡಿಸಿದ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ

ಶಿರಸಿ: 2019-20ನೇ ಸಾಲಿನಲ್ಲಿ ಶಿರಸಿ ತಾಪಂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಾಗೂ ವಿವಿಧ ಇಲಾಖೆಗಳ ವೇತನಕ್ಕಾಗಿ ಸುಮಾರು 86.18 ಕೋಟಿ (8618.66 ಲಕ್ಷ) ಅನುದಾನ ಹಂಚಿಕೆ ಮಾಡಲಾಗಿದ್ದು, ತಾ.ಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಆಯವ್ಯಯ ಮಂಡಿಸಿದ್ದಾರೆ.

ತಾಲೂಕ ಪಂಚಾಯತಿಯ ಸಭಾ ಭವನದಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2.80 ಕೋಟಿ ರೂ. ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ ಸುಮಾರು 63 ಕೋಟಿ ರೂ ಒದಗಿಸಿದ್ದು, ಇದರಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಾಗಿ ರೂ. 63 ಕೋಟಿ, ಕಚೇರಿ ವೆಚ್ಚಕ್ಕಾಗಿ ಸುಮಾರು 26 ಲಕ್ಷ ಹಾಗೂ ಶಾಲೆಗಳ ದುರಸ್ತಿಗೆ ಸುಮಾರು 9 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ.

ಆರೋಗ್ಯ ಇಲಾಖೆಗೆ ಸುಮಾರು ಸುಮಾರು 40 ಲಕ್ಷ ನೀಡಲಾಗಿದ್ದು, ಇದರಲ್ಲಿ ವೇತನಕ್ಕಾಗಿ 25 ಲಕ್ಷ, 8.72 ಲಕ್ಷ ಹೊರ ಗುತ್ತಿಗೆ ನೌಕರರ ವೇತನಕ್ಕಾಗಿ, 7.17 ಲಕ್ಷ ರೂ. ಕಚೇರಿ ವೆಚ್ಚಕ್ಕಾಗಿ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಸುಮಾರು 1.99 ಕೋಟಿ ರೂ. ಕಾಯ್ದಿರಿಸಲಾಗಿದ್ದು, ಇದರಲ್ಲಿ 44.82 ಲಕ್ಷ ವೇತನ, 7.75 ಲಕ್ಷ ಹೊರಗುತ್ತಿಗೆ ಸಿಬ್ಬಂದಿಗಳಿಗೆ ವೇತನ, ವಿದ್ಯಾರ್ಥಿ ವೇತನ ಹಾಗೂ ಕಾನೂನು ಪದವಿಧರರಿಗೆ ಸಹಾಯಧÀನಕ್ಕಾಗಿ 83.44 ಲಕ್ಷ ಹಾಗೂ ಇತರೇ ಕಾರ್ಯಕ್ರಮಗಳಿಗಾಗಿ 63.22 ಲಕ್ಷ ರೂ. ಕಾಯ್ದಿರಿಸಲಾಗಿದೆ.

ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಗೆ 49.10 ಲಕ್ಷ ರೂ. ನೀಡಲಾಗಿದ್ದು, ಇದರಲ್ಲಿ ವೇತನಕ್ಕಾಗಿ 5 ಲಕ್ಷ ಹಾಗೂ ವಿದ್ಯಾರ್ಥಿ ವೇತನ ಮತ್ತು ವಸತಿನಿಲಯಗಳ ಸುಧಾರಣೆಗೆ 44.10 ಲಕ್ಷ ರೂ. ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸುಮಾರು 8.22 ಕೋಟಿ ರೂ. ನೀಡಲಾಗಿದ್ದು, ಇದರಲ್ಲಿ ಅಂಗನವಾಡಿ ದುರಸ್ತಿಗಾಗಿ 7 ಲಕ್ಷ, ಶಾಲಾ ಪೂರ್ವ ಮಕ್ಕಳಿಗೆ ಆಹಾರ ಕಾರ್ಯ ಯೋಜನೆಗಾಗಿ ಸುಮಾರು 6.40 ಕೋಟಿ, ಅಧಿಕಾರಿ ಸಿಬ್ಬಂದಿ ವೇತನಕ್ಕಾಗಿ 78 ಲಕ್ಷ, ಅಂಗನವಾಡಿ ಬಾಡಿಗೆ ಮತ್ತು ಕಾರ್ಯಕರ್ತೆಯರ ಸಂಬಳಕ್ಕಾಗಿ ಸುಮಾರು 7.43 ಕೋಟಿ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳ ವೇತನಕ್ಕಾಗಿ ಸುಮಾರು 8.22 ಕೋಟಿ ರೂ. ನೀಡಲಾಗಿದೆ.

ತೋಟಗಾರಿಕೆ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗಾಗಿ 1.18 ಲಕ್ಷ ರೂ. ಅನುದಾನ ನೀಡಲಾಗಿದೆ. ಪಶು ಸಂಗೋಪನಾ ಇಲಾಖೆಗೆ ಸುಮಾರು 2.23 ಕೋಟಿ ರೂ. ಒದಗಿಸಲಾಗಿದ್ದು, ಇದರಲ್ಲಿ ವೇತನಕ್ಕಾಗಿ ಸುಮಾರು 2 ಕೋಟಿ ಹಾಗೂ ಕಚೇರಿ ವೆಚ್ಚ ಇತರೇ ಕಾರ್ಯಕ್ರಮಗಳಿಗಾಗಿ 19.41 ಲಕ್ಷ ರೂ ನೀಡಲಾಗಿದೆ. ಕೃಷಿ ಇಲಾಖೆಗೆ 59.54 ಲಕ್ಷ ರೂ. ನೀಡಲಾಗಿದ್ದು, ಇದರಲ್ಲಿ ವೇತನಕ್ಕೆ 57.30 ಲಕ್ಷ ಹಾಗೂ ಕಚೇರಿ ವೆಚ್ಚ, ಇತರೇ ಕಾರ್ಯಕ್ರಮಕ್ಕಾಗಿ 2.24 ಲಕ್ಷ ರೂ. ನೀಡಲಾಗಿದೆ. ತಾಲೂಕಾ ಪಂಚಾಯತ ಅಧೀನದಲ್ಲಿ ಬರುವ ಕಾರ್ಯಕ್ರಮಗಳಾದ ಎಸ್.ಜಿ.ಎಸ್.ವಾಯ್ ಉಸ್ತುವಾರಿ ಕೋಶದಡಿ 33 ಸಾವಿರ ರೂ ಕಾಯ್ದಿರಿಸಲಾಗಿದೆ. ಕೊಳವೆ ಬಾವಿ ದುರಸ್ತಿ ಮತ್ತು ನೀರು ಸರಬರಾಜು ಉದ್ದೇಶಕ್ಕಾಗಿ 2.47 ಲಕ್ಷ ರೂ. ಗುರಿ ನಿಗದಿ ಪಡಿಸಲಾಗಿದೆ. ತಾಪಂ ಅಧಿಕಾರಿ, ಸಿಬ್ಬಂದಿ, ಪಿಡಿಒ ಹಾಗೂ ಕಾರ್ಯದರ್ಶಿಗಳ ವೇತನ ಇನ್ನಿತರ ಖರ್ಚಿಗಾಗಿ ಸುಮಾರು 1.92 ಕೋಟಿ ರೂ. ಕಾಯ್ದಿರಿಸಲಾಗಿದೆ.

ಸದಸ್ಯ ರವಿ ಹೆಗಡೆ ತಾ.ಪಂನಿಂದ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಇಂಧನ ಮತ್ತು ಪ್ರವಾಸ ಭತ್ಯೆ ನೀಡಿದಂತೆ ಸದಸ್ಯರಿಗೂ ನೀಡಬೇಕೆಂದು ಆಗ್ರಹಿಸಿದಾಗ ಇದಕ್ಕೆ ಸದಸ್ಯರೆಲ್ಲರೂ ಧ್ವನಿಗೂಡಿಸಿದರು. ಇದಕ್ಕೆ ತಾಪಂ ಕಾರ್ಯನಿರ್ವಾಹಕಾಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವದಾಗಿ ತಿಳಿಸಿದರು. ಸಭೆಯಲ್ಲಿ ಅಧ್ಯಕ್ಷರು ಜಿಲ್ಲೆಯಲ್ಲಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿರುವ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲು ಸದಸ್ಯರ ಒಪ್ಪಿಗೆ ಮೇರೆಗೆ ನಿರ್ಣಯ ಕೈಗೊಂಡರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.