ಗೋಕರ್ಣದಲ್ಲಿ ತಂಪೆರೆದ ಮಳೆ: ತುಂಬಿ ಹರಿದ ರಸ್ತೆಗಳು: ವಾಹನ ಸಂಚಾರಕ್ಕೆ ಪರದಾಟ

ಗೋಕರ್ಣ: ಬಿಸಿಲ ಬೇಗೆಗೆ ನಲುಗಿದ್ದ ಪುಣ್ಯಕ್ಷೇತ್ರದಲ್ಲಿ ಮಂಗಳವಾರ ಮಳೆಯ ಆಗಮನವಾಗಿ ತಂಪೆರೆದಿದೆ. ಹಿಂದೆಂದೂ ಕೇಳಿರದಂತಹ ನೀರಿನ ಅಭಾವದಿಂದ ಜನರು ಪರದಾಡುತ್ತಿದ್ದರು. ಕೊನೆಗೂ ಮುಂಗಾರಿನ ಪ್ರವೇಶದಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸತತ 4 ಘಂಟೆಗೂ ಅಧಿಕ ಕಾಲ ಭಾರಿ ಮಳೆಯಾಗುತ್ತಿದ್ದು, ಹಾಗೆಯೇ ಮುಂದುವರಿದಿದೆ.

ಮತ್ತೆ ಅದೇ ರಾಗ ಅದೇ ಪಾಡು, ಪರದಾಟ: ಪ್ರತಿ ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿನ ಚರಂಡಿಗಳ ನೀರು ರಸ್ತೆಯ ಮೇಲೆ ಬಂದು ಜನರು ತಿರುಗಾಡಲು ಪರದಾಡುವ ಪರಿಸ್ಥಿತಿ ನಿರ್ಮಣವಾಗುತ್ತಿದ್ದು, ಅದರಂತೆ ಗಂಜಿಗದ್ದೆ ಭಾಗದಲ್ಲಿ ನೀರು ರಸ್ತೆಗೆ ತುಂಬಿ ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ಹರಸಾಹಸಪಡಬೇಕಾಯಿತು. ಇದಕ್ಕೆ ಮಳೆಗಾಲ ಪ್ರಾರಂಭದ ಪೂರ್ವದಲ್ಲಿ ಚರಂಡಿಗಳ ಹೂಳೆತ್ತಿ ಸರಾಗಾವಾಗಿ ನೀರು ಹೋಗುವಂತೆ ಮಾಡದಿರುವುದೇ ಕಾರಣವಾಗಿದ್ದು, ಪ್ರತಿ ಬಾರಿ ಗ್ರಾಮ ಪಂಚಾಯತ ಈ ಕಾರ್ಯವನ್ನು ಮಾಡದೇ ಇರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪಿಸುತ್ತಿದ್ದಾರೆ. ಇನ್ನಾದರೂ ಗ್ರಾಮ ಪಂಚಾಯತ ಸೂಕ್ತ ಕ್ರಮತೆಗೆದುಕೊಳ್ಳ ಬೇಕಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.