ಕುಮಟಾ ಮುರಾರ್ಜಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ


ಕುಮಟಾ: ಸ್ವಚ್ಛ ಭಾರತ ಮಿಶನ್ (ಗ್ರಾ), ಜಿಲ್ಲಾ ಪಂಚಯತ ಉತ್ತರ ಕನ್ನಡ, ತಾಲೂಕ ಪಂಚಾಯತ ಕುಮಟಾ ಹಾಗೂ ಗ್ರಾಮ ಪಂಚಾಯತ ಹೆಗಡೆ ಇವರ ಸಹಯೋಗದಲ್ಲಿ ಹೆಗಡೆಯ ಮುರಾರ್ಜಿ ಶಾಲೆಯಲ್ಲಿ ಮಂಗಳವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಗಿಡ ನೆಟ್ಟು ನೀರೆರೆವ ಮೂಲಕ ಶಾಸಕ ದಿನಕರ ಶೆಟ್ಟಿ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪರಿಸರ ಬೆಳೆಸಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಪಣತೊಡಬೇಕಿದೆ. ಇದು ಕೇವಲ ಆಚರಣೆ ಆಗಿರಬಾರದು. ಪ್ರತಿಯೊಬ್ಬರೂ ಗಿಡ ನೆಟ್ಟು ಬೆಳೆಸುವುದನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. 1973 ರಲ್ಲಿ ವಿಶ್ವ ಪರಿಸರ ದಿನಾಚರಣೆ ಆರಂಭವಾಯಿತಾದರೂ, ಅದು ಅಷ್ಟು ಪರಿಣಾಮಕಾರಿಯಾಗಿ ಆಗಿರಲಿಲ್ಲ. ಆದರೆ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಂದ ನಂತರ ಸ್ವಚ್ಛ ಭಾರತ ಯೋಜನೆ, ಪ್ರತಿಯೊಬ್ಬರ ಮನೆಯಲ್ಲಿ ಶೌಚಾಲಯ, ಉಜ್ವಲ ಯೋಜನೆ ಇವೆಲ್ಲ ಸಮಾಜದ ಹಿತದೃಷ್ಟಿಯಿಂದ ಹಾಗೂ ಜನರ ಆರೋಗ್ಯಯುತ ಬದುಕಿಗೆ ಒಳಿತು ಮಾಡಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಶಿಕ್ಷಣ ಮತ್ತ ಆರೋಗ್ಯ ಸ್ಥಾಯಿ ಸಮೀತಿ ಅಧಕ್ಷ ರತ್ನಾಕರ ನಾಯ್ಕ ಮಾತನಾಡಿ, ಇಂದಿನ ವಿದ್ಯಾಥಿಗಳು ಮುಖ್ಯವಾಗಿ ಪರಿಸರ ರಕ್ಷಣೆ ಬಗ್ಗೆ ತಿಳಿದುಕೊಳ್ಳಬೇಕು. ಗಿಡವನ್ನು ಕೇವಲ ಬೆಳೆಸಿದರೆ ಸಾಕಾಗುವುದಿಲ್ಲ, ಪ್ರದಿದಿನ ನೀರೆರೆದು ಪೋಷಿಸಬೇಕು. ಗಿಡ ಮರಗಳ ನಾಶದಿಂದ ಇಂದು ಕಾಡು ಕಡೆಮೆಯಾಗಿ ಪ್ರಾಣಿಗಳಿಗೂ ಕೂಡ ಆರೋಗ್ಯಯುತ ಬದುಕು ಇಲ್ಲದಂತಾಗಿದೆ. ಇದರಿಂದ ಅವು ನಾಡಿಗೆ ಬರಲಾರಂಭಿಸಿದೆ ಎಂದರು.

ತಾ.ಪಂ ಅಧ್ಯಕ್ಷೆ ವಿಜಯಾ ಪಟಗಾರ, ಹೆಗಡೆ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಪಟಗಾರ ಮಾತನಾಡಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ ಟಿ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ವಸಂತಲಕ್ಷ್ಮಿ ನಿರೂಪಿಸಿದರು. ಪ್ರಾಂಸುಪಾಲ ಶ್ರೀನಿವಾಸ ನಾಯ್ಕ ವಂದಿಸಿದರು.

ವೇದಿಕೆಯಲ್ಲಿ ತಾ.ಪಂ ಉಪಾಧ್ಯಕ್ಷೆ ಗೀತಾ ಮುಕ್ರಿ, ತಾ.ಪಂ ಸ್ಥಾಯಿ ಸಮೀತಿ ಅಧ್ಯಕ್ಷ ಜಗನ್ನಾಥ ನಾಯ್ಕ, ಹೆಗಡೆ ಗ್ರಾ.ಪಂ ಉಪಾಧ್ಯಕ್ಷೆ ನಾಗವೇಣಿ ಹೆಗಡೆ, ಸದಸ್ಯೆ ಜಯಾ ಮುಕ್ರಿ, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.