ಅತಿ ವೇಗವಾಗಿ ಬೈಕ್ ಚಾಲನೆ: ಸವಾರ ಸ್ಥಳದಲ್ಲೇ ಸಾವು

ಶಿರಸಿ: ಅತಿ ವೇಗದಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವಕನೊರ್ವ ನಿಯಂತ್ರಣ ತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ.

ಆಸಿಫ್ ಶುಕುರ್ ಶೇಖ್ (25) ಮೃತಪಟ್ಟ ಯುವಕನಾಗಿದ್ದಾನೆ. ಶಿರಸಿ ನಗರದ ಝೂ ಸರ್ಕಲ್ ಬಳಿ ತಾಯಿಯನ್ನು ಕುರಿಸಿಕೊಂಡು ಅತಿ ವೇಗದಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು ತಲೆ ನೆಲಕ್ಕೆ ಜಜ್ಜಿದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.