ಸುವಿಚಾರ

ನ ಕಶ್ಚಿಚ್ಚಂಡಕೋಪಾನಾಮಾತ್ಮೀಯೋ ನಾಮ ಭೂಭುಜಾಮ್
ಹೋತಾರಮಪಿ ಜುಹ್ವಾನಂ ಸ್ಪೃಷ್ಟೋ ದಹತಿ ಪಾವಕಃ ||

ಭಯಂಕರವಾಗಿ ಕೋಪ ಮಾಡಿಕೊಳ್ಳುವ ರಾಜನಿಗೆ ಆತ್ಮೀಯರೆನ್ನುವವರು ಯಾರೂ ಇಲ್ಲ. ಯಾರೂ ಇಲ್ಲ ಅಂದರೆ ಯಾರೂ ಇರಲಾರರು ಎಂದರ್ಥ, ಯಾಕೆಂದರೆ ಅವನಿಗೆ ಬರುವ ಕೋಪ ಮತ್ತು ಇರುವ ಅಧಿಕಾರ ಬಲಕ್ಕೆ ಯಾರೇ ಎದುರಿಗೆ ಸಿಕ್ಕರೂ ಸುಟ್ಟುಹೋಗುವುದೇ ನಿಜ, ಹಾಗಾಗಿ ಜನರು ಅಂತರವನ್ನು ಕಾಪಾಡಿಕೊಳ್ಳುತ್ತಾರೆ. ಅವನೊಂದು ಬಗೆಯಲ್ಲಿ ಅಗ್ನಿಯಿದ್ದಂತೆ. ಯಜ್ಞಕಾರ್ಯದಲ್ಲಿ ಅಗ್ನಿಯು ತನಗೆ ಹವಿಸ್ಸು ಅರ್ಪಿಸುತ್ತಿರುವ ಯಜ್ಞಕರ್ತನಾದ ಹೋತಾರನನ್ನೂ ತನ್ನ ಸಂಪರ್ಕಕ್ಕೆ ಬಂದಲ್ಲಿ ಸುಡದೇ ಬಿಡುವುದಿಲ್ಲ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.