ಸುವಿಚಾರ

ಶುನಃ ಪುಚ್ಛಮಿವ ವ್ಯರ್ಥಂ ಜೀವಿತಂ ವಿದ್ಯಯಾ ವಿನಾ
ನ ಗುಹ್ಯಗೋಪನೇ ಶಕ್ತಂ ನ ಚ ದಂಶನಿವಾರಣೇ ||

ವಿದ್ಯೆಯಿಲ್ಲದೆ ಬದುಕಲಾಗದು ಎಂದೇನಿಲ್ಲ, ಬದುಕಲಾಗಬಹುದೇನೋ. ಆದರೆ ಅದು ವ್ಯರ್ಥವಾದೊಂದು ಜೀವನವಾಗಿರುತ್ತದೆ. ಅದೆಷ್ಟು ವ್ಯರ್ಥವೆಂದರೆ ನಾಯಿಯ ಬಾಲದಷ್ಟು. ನಾಯಿಯ ಬಾಲ ನೋಡಿ ಆ ಕಡೆ ಮುಚ್ಚಬೇಕಾದ್ದನ್ನು ಮುಚ್ಚೋದಕ್ಕೂ ಅಸಮರ್ಥ, ಈ ಕಡೆ ನೊಣ ಕಡಿದರೆ ಅದನ್ನೋಡಿಸುವುದಕ್ಕೂ ಲಾಯಕ್ಕಿಲ್ಲ. ಸುಮ್ಮನೆ ಹಿಂದುಗಡೆ ಅದೊಂದು ಬಾಲ ಹೆಸರಿಗೆ ಇದೆ ಅಷ್ಟೆ. ವಿದ್ಯೆ ಇಲ್ಲದಿದ್ದವನ ಬದುಕೂ ಅಷ್ಟೇ, ಯಾವ ಉಪಯೋಗಕ್ಕೂ ಇಲ್ಲ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.