ಸುವಿಚಾರ

ರಾಜನ್ ದುಧುಕ್ಷಸಿ ಯದಿ ಕ್ಷಿತಿಧೇನುಮೇತಾಂ
ತೇನಾದ್ಯ ವತ್ಸಮಿವ ಲೋಕಮಮುಂ ಪುಷಾಣ|
ತಸ್ಮಿಂಶ್ಚ ಸಮ್ಯಗನಿಶಂ ಪರಿಪೋಷ್ಯಮಾಣೇ
ನಾನಾಫಲೈಃ ಫಲತಿ ಕಲ್ಪಲತೇವ ಭೂಮಿಃ ||

ಹೇ ರಾಜನೇ, ಭೂಮಿಯೆಂಬ ಈ ಆಕಳನ್ನು ಕರೆಯಬೇಕು (ಹಾಲು ಕರೆಯಬೇಕು) ಎಂದು ಬಯಸುತ್ತಿರುವಿಯಾದರೆ ಈ ಪ್ರಜೆಗಳನ್ನು ಭೂಮಿಯೆಂಬ ಆಕಳಿನ ಕರುಗಳೋ ಎಂಬಂತೆ ಪೋಷಿಸು, ಚೆನ್ನಾಗಿ ನೋಡಿಕೋ. ಪ್ರಜೆಗಳನ್ನು ನಿನ್ನದೇ ಮಕ್ಕಳಂತೆ ಲಾಲಿಸುವಿಕೆಯಿಂದ ಸಾಕ್ಷಾತ್ ಕಲ್ಪತರುವಿನಂತೆಯೇ ಈ ಭೂಮಿಯು ನಾನಾಬಗೆಯ ಫಲಗಳನ್ನು ಕೊಟ್ಟು ಸಲಹುವಳು.

ಭರ್ತೃಹರಿಯ ನೀತಿಶತಕದ ಮಾತಿದು. ರಾಜನು ತನ್ನ ರಾಜ್ಯವೆಂಬ ಭೂಮಿತುಂಡಿನಿಂದ ಆದಾಯವನ್ನು ಬಯಸುತ್ತಾನಾದರೆ ವಿವಿಧ ಬಗೆಯ ಉದ್ಯೋಗಗಳನ್ನು ಮಾಡಲು ಮತ್ತು ಕೃಷಿಯನ್ನು ಮಾಡಲು ಆ ರಾಜ್ಯದ ಜನತೆಯನ್ನು ಪ್ರೋತ್ಸಾಹಿಸಬೇಕು. ಆ ವಿಧದಲ್ಲಿ ರಾಜ್ಯವು ವಿವಿಧ ಫಲಧಾನ್ಯಗಳಿಂದ ಸಮೃದ್ಧವಾಗುತ್ತದೆ. ಮತ್ತು ಅದರ ಮೇಲೆ ಯಥಾ ಯೋಗ್ಯವಾದ ಕರವನ್ನು ವಿಧಿಸಿ ರಾಜನು ಬೊಕ್ಕಸವನ್ನು ತುಂಬಿಸಿಕೊಳ್ಳಬೇಕು. ಅತಿಯಾಗಿ ಲೂಟಿಗೈಯುವ ಕರವನ್ನು ವಿಧಿಸುವುದು ಮತ್ತು ಪುಕ್ಕಟೆಯಾಗಿ ಜನರಿಗೆ ಹಣ ಕೊಟ್ಟು ಅವರು ಉದ್ಯೋಗ ಕೈಗೊಳ್ಳದಂತೆ ಮಾಡುವುದು ರಾಜನಾದವನು ಮಾಡಬಾರದ ಕೆಲಸ. ಪುಕ್ಕಟೆ ಹಣ ಕೊಡುತ್ತೇವೆ ಅನ್ನುವ ಯಾವ ಯುವರಾಜನನ್ನೂ ನಂಬಬೇಡಿ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.