ಸುವಿಚಾರ

ಸ್ವಾಯತ್ತಮೇಕಾಂತಗುಣಂ ವಿಧಾತ್ರಾ
ವಿನಿರ್ಮಿತಂ ಛಾದನಮಜ್ಞತಾಯಾಃ |
ವಿಶೇಷತಃ ಸರ್ವವಿದಾಂ ಸಮಾಜೇ
ವಿಭೂಷಣಂ ಮೌನಮಪಂಡಿತಾನಾಮ್ ||

ತನ್ನಷ್ಟಕೆ ತಾನಿದ್ದುಬಿಡುವ ಏಕಾಂತಗುಣ ಅಥವಾ ಮೌನವೆಂಬುದು ಇದೆಯಲ್ಲ ಅದು ನಮ್ಮ ನಮ್ಮ ಅಜ್ಞಾನವನ್ನು ಮುಚ್ಚಿಕೊಳ್ಳಲು ಸಾಕ್ಷಾತ್ ಬ್ರಹ್ಮನೇ ಕೊಡಮಾಡಿದ ಆಚ್ಛಾದನ. ವಿಶೇಷವಾಗಿ ಸರ್ವಜ್ಞರ ಸಮಾಜದಲ್ಲಿ ಮಾತಾಡದೇ ಪಂಡಿತರಲ್ಲದವರಿಗೆ ಸುಮ್ಮನಿರುವುದೇ ನಿಜವಾದ ಆಭರಣವು.
ಸಮಾಜದಲ್ಲಿ ಬಹುತೇಕರು ತಮಗೆಲ್ಲ ತಿಳಿದಿದೆಯೆನ್ನುವಂತೆ ಆಡುತ್ತಾರೆ, ಮತ್ತು ಅವರ ನಡುವೆ ಸುಮ್ಮನಿರುವುದೇ ಲೇಸೆಂಬ ಸಣ್ಣದೊಂದು ವಿಡಂಬನೆಯೂ ಇಲ್ಲುಂಟು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.