ಸಫಲವಾದ ನೆಲ್ಲಿಕೇರಿ ಬೋರ್‌ವೆಲ್‌ನಿಂದ ಉತ್ತಮ ನೀರು ಪಡೆಯುವ ಶಾಸಕ ದಿನಕರ ಶೆಟ್ಟಿ ಪ್ರಯತ್ನ

ಕುಮಟಾ: ಪಟ್ಟಣದಲ್ಲಿ ಟ್ಯಾಂಕರ್ ನೀರಿನ ವಿತರಣೆಗೆ ಜಲಮೂಲಗಳ ಕೊರತೆಯಾಗಿದೆ. ಈ ಹಿನ್ನಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಜಾಗದಲ್ಲಿನ ಹಳೆಯ ಬೋರ್‌ವೆಲ್‌ಗಳು, ಕೆರೆ, ಬಾವಿಗಳನ್ನು ಗುರುತಿಸಿ ಉತ್ತಮ ನೀರು ಪಡೆಯುವ ಶಾಸಕ ದಿನಕರ ಶೆಟ್ಟಿಯವರ ಪ್ರಾಮಾಣಿಕ ಪ್ರಯತ್ನಕ್ಕೆ ನೆಲ್ಲಿಕೇರಿ ಕೃಷಿ ಸಂಶೋಧನಾ ಕೇಂದ್ರದ ಬೋರ್‌ವೆಲ್‌ನಲ್ಲಿ ಭಾನುವಾರ ಉತ್ತಮವಾದ, ಹೇರಳ ನೀರು ಲಭಿಸಿದೆ.

ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಅಘನಾಶಿನಿ ನೀರು ಸಂಪೂರ್ಣ ಬತ್ತಿರುವುದರಿಂದ ಪಟ್ಟಣದಲ್ಲಿನ ಖಾಸಗಿ ಹಾಗೂ ಸರ್ಕಾರಿ ಬೋರ್‌ವೆಲ್‌ಗಳನ್ನು ಶೋಧಿಸುತ್ತಿದ್ದೇವೆ. ಈಗಾಗಲೇ ಯಾತ್ರಿ ನಿವಾಸದ ಬೋರವೆಲ್ ನೀರನ್ನು ಪಟ್ಟಣಕ್ಕೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಬಳಸಲಾಗುತ್ತಿದೆ. ಈಗ ನೆಲ್ಲಿಕೇರಿಯ ಬೋರವೆಲ್‌ನಲ್ಲಿಯೂ ಉತ್ತಮವಾದ ನೀರು ಲಭಿಸಿದೆ. ಇದನ್ನು ಹೊರತು ಪಡಿಸಿ ಬೇರೆ ಬೇರೆ ಕಡೆಗಳಲ್ಲಿಯೂ ನೀರಿನ ಮೂಲಗಳನ್ನು ಹುಡುಕಿದ್ದೇವೆ. ಪಟ್ಟಣಕ್ಕೆ ಸಾಕಾಗುವಷ್ಟು ನೀರು ಪಟ್ಟಣದಲ್ಲಿಯೇ ದೊರೆಯುತ್ತಿತ್ತು. ಆದರೆ ತಾಲೂಕಾಡಳಿತ, ಪುರಸಭೆ ಮುಖ್ಯಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಈ ಬಗೆಗೆ ಮುತುವರ್ಜಿವಹಿಸುತ್ತಿಲ್ಲ ಎಂದರು.

Categories: ಚಿತ್ರ ಸುದ್ದಿ

Leave A Reply

Your email address will not be published.