ಸುವಿಚಾರ

ತಾನೀಂದ್ರಿಯಾಣ್ಯವಿಕಲಾನಿ ತದೇವ ನಾಮ
ಸಾ ಬುದ್ಧಿರಪ್ರತಿಹತಾ ವಚನಂ ತದೇವ |
ಅರ್ಥೋಷ್ಮಣಾ ವಿರಹಿತಃ ಪುರುಷಃ ಕ್ಷಣೇನ
ಸೋಽಪ್ಯನ್ಯ ಏವ ಭವತೀತಿ ವಿಚಿತ್ರಮೇತತ್ ||

ಅವೇ ಕೆಡುಕಿಲ್ಲದ ಇಂದ್ರಿಯಗಳು, ಅದೇ ಹೆಸರು, ಅದೇ ಅಪ್ರತಿಹತವಾದ ಅಸಾಧಾರಣ ಬುದ್ಧಿವಂತಿಕೆ, ಅದೇ ವಾಗ್ವಿಲಾಸ, ಆದರೆ ಇವೆಲ್ಲ ಇದ್ದೂ ಹಣವೆಂಬುದು ಮಾತ್ರವೇ ಅವನನ್ನು ತೊರೆದುಹೋದಕೂಡಲೇ ಅವನು ಬೇರೆಯವನಂತೆ ಕಂಡುಬಿಡುತ್ತಾನಲ್ಲ, ಇದೊಂದು ಲೋಕದ ವಿಚಿತ್ರವೆನ್ನಲಡ್ಡಿಯಿಲ್ಲ. ಹಣವೇ ಸರ್ವಗುಣಗಳಿಗೂ ಆಧಾರವೆನ್ನುವುದನ್ನು ಬೇರೆ ಹೇಳಬೇಕೆ? ಲೋಕದಲ್ಲಿ ಗುಣಗಳಿಗೆ, ಸಾಮರ್ಥ್ಯಕ್ಕೆ, ಕಲೆ ಮತ್ತು ಕೌಶಲಕ್ಕೆ ಬೆಲೆ ಇದೆ ನಿಜ, ಆದರೆ ಹಣಕ್ಕಿರುವ ಬೆಲೆಯೇ ವ್ಯಾಪಕವಾದ್ದು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.