ಶಿರಸಿ: ರಸ್ತೆ ಬದಿಗಳಲ್ಲಿ ಹಾಕುವ ಪ್ಲಾಸ್ಟಿಕ್ ಗಳನ್ನು ತಿಂದು ಜೀವನ್ಮರಣದ ಸ್ಥಿತಿಯಲ್ಲಿದ್ದ ಎಮ್ಮೆ ಮಣಕದ ಹೊಟ್ಟೆಯಿಂದ ಶಸ್ತ್ರ ಚಿಕಿತ್ಸೆಯ ಮೂಲಕ ಬರೋಬ್ಬರಿ 80 ಕೆಜಿ ಪ್ಲಾಸ್ಟಿಕನ್ನು ಹೊರತೆಗೆದ ಘಟನೆ ತಾಲೂಕಿನ ಮಂಜಳ್ಳಿಯಲ್ಲಿ ನಡೆದಿದೆ.
ಪಶು ವೈದ್ಯ ಡಾ.ಪಿ.ಎಸ್.ಹೆಗಡೆ ಮಂಜಳ್ಳಿಯ ಶೇಶು ದೇವಡಿಗ ಎಂಬುವರ ಮನೆಯ 8 ತಿಂಗಳ ಗರ್ಭಿಣಿ ಎಮ್ಮೆ ಮಣಕದ ಹೊಟ್ಟೆಯಲ್ಲಿದ್ದ ಬೃಹತ್ ಪ್ರಮಾಣದ ಪ್ಲಾಸ್ಟಿಕನ್ನು ಚಿಕಿತ್ಸೆಯ ಮೂಲಕ ಹೊರತೆಗೆದಿದದ್ದಾರೆ.
ಹೊಟ್ಟೆಯನ್ನು ಕೊರೆದು 4 ಗಂಟೆಗೂ ಅಧಿಕ ಕಾಲ ಶಸ್ತ್ರ ಚಿಕಿತ್ಸೆ ನೀಡಿ ಎಮ್ಮೆಯನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ. ಬೀದಿಯಲ್ಲಿ ಮೆಯುತ್ತಿದ್ದ ಕಾರಣ ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಒಳಹೋಗಿ ಎಮ್ಮೆ ಸಾಯುವ ಸ್ಥಿತಿಗೆ ತಲುಪಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಕೆ.ವಿ.ಕೆ.ಯ ಡಾ.ರಂಗನಾಥ ಸಹಕಾರ ನೀಡಿದ್ದಾರೆ.