ಪ್ರಧಾನ ಮಂತ್ರಿಯಾಗಿ ಮೋದಿ ಪ್ರಮಾಣ ವಚನ: ಕುಮಟಾದಲ್ಲಿ ವಿಜಯೋತ್ಸವ

ಕುಮಟಾ: ನರೇಂದ್ರ ಮೋದಿಯವರು ಎರಡನೇಯ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿದ ನಿಮಿತ್ತ ಕುಮಟಾ ಮಂಡಲ ಅಧ್ಯಕ್ಷ ಕುಮಾರ ಮಾರ್ಕಾಂಡೆ ನೇತೃತ್ವದಲ್ಲಿ ಪಟ್ಟಣದ ಗಿಬ್ ಸರ್ಕಲ್‍ನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ, ಕ್ಷೇತ್ರ ಸಂಚಾಲಕ ಎಂ.ಜಿ ಭಟ್, ಪ್ರಮುಖರಾದ ವಿಶ್ವನಾಥ ನಾಯ್ಕ, ಪ್ರಶಾಂತ ನಾಯ್ಕ, ಹೇಮಂತಕುಮಾರ ಗಾಂವಕರ, ಗಜಾನನ ಗುನಗಾ, ಪುರಸಭೆ ಸದಸ್ಯರಾದ ಮಹೇಶ ನಾಯ್ಕ, ಮೋಹಿನಿ ಗೌಡ, ಪಲ್ಲವಿ ಮಡಿವಾಳ, ಸೂರ್ಯಕಾಂತ ಗೌಡ, ಶೈಲಾ ಗೌಡ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.