ಲೋಕಸಭಾ ಚುನಾವಣೆ: ಯಾರಿಗೆ ಸೋಲು- ಯಾರಿಗೆ ಗೆಲುವು: ಇಲ್ಲಿದೆ ಮಾಹಿತಿ

ಕಾರವಾರ: 2019 ರ ಲೋಕಸಭಾ ಚುನಾವಣೆ ಫಲಿತಾಂಶ ಇಂದು ಹೊರ ಬಿದ್ದಿದ್ದು, ಕರ್ನಾಟಕದ ಫಲಿತಾಂಶ ಹಲವರ ಅಚ್ಚರಿಗಳಿಗೆ ಕಾರಣವಾಗಿದೆ. ಮೋದಿ ಅಲೆಯು ದೇಶದ ತುಂಬೆಲ್ಲಾ ಹಬ್ಬಿದ್ದು, ರಾಜ್ಯದಲ್ಲೂ ಮೋದಿ ಹವಾ ಹೆಚ್ಚಾಗಿಯೇ ಪರಿಣಾಮ ಬೀರಿದೆ.

ರಾಜ್ಯದ ಒಟ್ಟೂ 28 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನವನ್ನು ಬಿಜೆಪಿಯೇ ಸಾಧಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕರ್ನಾಟಕದಲ್ಲಿ ಬಿಜೆಪಿ 27 ಕ್ಷೇತ್ರ, ಕಾಂಗ್ರೆಸ್ 21 ಕ್ಷೇತ್ರ ಮತ್ತು ಜೆಡಿಎಸ್ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿ ಹೆಚ್ಚು ಸ್ಥಾನಗಳಿಸದಂತೆ ತಂತ್ರ ರೂಪಿಸಿದ್ದವು. ಆದರೆ, ಈ ತಂತ್ರ ಫಲ ನೀಡದೆ, ಕೇಸರಿ ಅಲೆಯಲ್ಲಿ ಮೈತ್ರಿ ಪಕ್ಷ ಸಂಪೂರ್ಣ ಕುಗ್ಗುವ ವಾತಾವರಣ ಸೃಷ್ಟಿಯಾಗುತ್ತಿದೆ.

ಗೆಲುವು ಸಾಧಿಸಿ ಅಧಿಕೃತ ಘೋಷಣೆ ಬಾಕಿ ಇರುವ ಕ್ಷೇತ್ರಗಳು: ಉ.ಕನ್ನಡ: ಅನಂತ್ ಕುಮಾರ್ ಹೆಗಡೆ (ಬಿಜೆಪಿ) ಗೆಲುವು, ಆನಂದ್ ಆಸ್ನೋಟಿಕರ್ (ಮೈತ್ರಿಕೂಟ) ಸೋಲು, ಕೋಲಾರ: ಸಿ.ಮನಿಸ್ವಾಮಿ (ಬಿಜೆಪಿ) ಗೆಲುವು, ಕೆ.ಎಚ್.ಮುನಿಯಪ್ಪ (ಮೈತ್ರಿಕೂಟ), ಹಾಸನ: ಪ್ರಜ್ವಲ್ ರೇವಣ್ಣ (ಮೈತ್ರಿಕೂಟ) ಗೆಲುವು, ಎ.ಮಂಜು (ಬಿಜೆಪಿ) ಸೋಲು, ನಳೀನ್ ಕುಮಾರ್ ಕಟೀಲ್ (ಬಿಜೆಪಿ) ಗೆಲುವು, ಮಿಥುನ್ ರೈ (ಮೈತ್ರಿಕೂಟ) ಸೋಲು, ಬಳ್ಳಾರಿ: ವೈ.ದೇವೇಂದ್ರಪ್ಪ (ಬಿಜೆಪಿ) ಗೆಲುವು, ವಿ.ಎಸ್.ಉಗ್ರಪ್ಪ (ಮೈತ್ರಿಕೂಟ) ಸೋಲು, ಬೆಂಗಳೂರು ಗ್ರಾಮಾಂತರ: ಡಿ.ಕೆ.ಸುರೇಶ್ (ಮೈತ್ರಿಕೂಟ), ಅಶ್ವಥ್ ನಾರಾಯಣ್ (ಬಿಜೆಪಿ) ಸೋಲು, ಶಿವಮೊಗ್ಗ: ಬಿ.ವೈ.ರಾಘವೇಂದ್ರ (ಬಿಜೆಪಿ) ಗೆಲುವು, ಮಧು ಬಂಗಾರಪ್ಪ (ಮೈತ್ರಿಕೂಟ) ಸೋಲು

Categories: ಜಿಲ್ಲಾ ಸುದ್ದಿ

Leave A Reply

Your email address will not be published.